ಬಂಟ್ವಾಳ: ಯುವಜನತೆ ಸಂಘಟಿತರಾಗಿ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಸಮೃದ್ಧ ಸಮಾಜ ನಿರ್ಮಾಣ; ಎ.ರಾಜೇಂದ್ರ ಶೆಟ್ಟಿ

ಬಂಟ್ವಾಳ: ತಾಲೂಕಿನ ಅರಳಗ್ರಾಮದ “ಅರಳ ನವಶಕ್ತಿ ಯುವಕ ಮಂಡಲದ 41 ವಾರ್ಷಿಕೋತ್ಸವದಲ್ಲಿ 16ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನವೀಕೃತ ಕಟ್ಟಡ ಉದ್ಘಾಟಿಸಿ ಮಾತನಾಡಿದ ಶ್ರೀಗರುಡ ಮಹಾಕಾಳಿ ದೇವಸ್ಥಾನದ ಆಡಳಿತ ಮೊಕ್ತಸರ ಎ.ರಾಜೇಂದ್ರ ಶೆಟ್ಟಿ ಅವರು ಸುಸಂಸ್ಕೃತ ಯುವಜನತೆ ಸಂಘಟಿತರಾಗಿ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಸಮೃದ್ಧ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಅರಳ ఓం ಜನಹಿತಾಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಾಂತಾರಾಮ ಶೆಟ್ಟಿ, ಉದ್ಯಮಿಗಳಾದ ಸಂದೇಶ್ ಶೆಟ್ಟಿ ಮಂಗಳೂರು, ಪ್ರಕಾಶ್ ಅಂಚನ್, ಸಿದ್ಧಕಟ್ಟೆ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ ಪ್ರಭಾಕರ ಪ್ರಭು, ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಮಾವಂತೂರು, ಮುತ್ತೂರು ಗ್ರಾ.ಪಂ. ಅಧ್ಯಕ್ಷ ಪ್ರವೀಣ ಆಳ್ವ, ಅರಳ ಗ್ರಾ. ಪಂ.ಅಧ್ಯಕ್ಷೆ ದೇವಕಿ (ಧನ್ಯಾ) ಪಾಲಡ್ಕ, ನವಶಕ್ತಿ ಮಹಿಳಾ ಮಂಡಲ ಅಧ್ಯಕ್ಷೆ ಅಶ್ವಿತಾ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ವೇಳೆ ಎ.ರಾಜೇಂದ್ರ ಶೆಟ್ಟಿ, ಶಾಂತಾರಾಮ ಶೆಟ್ಟಿ, ಡೊಂಬಯ ಅರಳ, ಜಗನ್ನಾಥ ಶೆಟ್ಟಿ, ಸಾಗರ್, ಶಶಿಕುಮಾರ್ ಅವರನ್ನು ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು ಅವರು ಸನ್ಮಾನಿಸಿ ಶುಭಹಾರೈಸಿದರು. ಸಂಘದ ಅಧ್ಯಕ್ಷ ರಂಜನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಮಾಜಿ ಅಧ್ಯಕ್ಷ ಜಗದೀಶ ಆಳ್ವ ಅಗೊಂಡೆ ವಂದಿಸಿದರು.ಪ್ರಧಾನ ಕಾರ್ಯದರ್ಶಿ ದೇವದಾಸ್ ಅಂಬರ್ದೋಟ ವರದಿ ವಾಚಿಸಿದರು. ಡೊಂಬಯ ಅರಳ, ಶಿಕ್ಷಕ ಮಹೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.