ನಾಗರಿಕ ಕ್ರಿಯಾ ಸಮಿತಿಯ ವತಿಯಿಂದ ಗಣರಾಜ್ಯೋತ್ಸವ ದಿನ
ಬಂಟ್ವಾಳ:ಬಿ.ಸಿ.ರೋಡಿಗೆ ಸಮೀಪದ ಸಂಚಯಗಿರಿ ನಾಗರಿಕ ಕ್ರಿಯಾ ಸಮಿತಿಯ ವತಿಯಿಂದ ಗಣರಾಜ್ಯೋತ್ಸವ ದಿನ ಆಚರಿಸಲಾಯಿತು.

ಕ್ರಿಯಾ ಸಮಿತಿಯ ಅಧ್ಯಕ್ಷ ಸುರೇಶ್ ಬಂಗೇರ ಅಧ್ಯಕ್ಷತೆ ವಹಿಸಿದ್ದರು.ಬಂಟ್ವಾಳ ಎಸ್ ವಿ.ಎಸ್ ಶಾಲೆಯ ಮುಖ್ಯೋಪಾಧ್ಯಾಯ ಸತೀಶ್ ಬಂಗೇರ ಪ್ರಧಾನ ಭಾಷಣ ಮಾಡಿ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದಾದ ಸಂವಿಧಾನವನ್ನು ಭಾರತ ಹೊಂದಿದೆ. ನಮ್ಮದು ಪ್ರಜಾಪ್ರಭುತ್ವ ದೇಶ ಎನ್ನುವುದು ಪ್ರಜೆಗಳಾದ ನಮಗೆಲ್ಲರಿಗೂ ಹೆಮ್ಮೆ ಎಂದು ತಿಳಿಸಿದರು. ನಾಗರಿಕ ಕ್ರಿಯಾ ಸಮಿತಿಯ ಗೌರವಾಧ್ಯಕ್ಷ ನರಸಿಂಹರಾಜ್ ಹೊಳ್ಳ, ಉಪಾಧ್ಯಕ್ಷೆ ಪ್ರಿಯಾಲತಾ, ಕಾರ್ಯದರ್ಶಿ ಶೇಖರ್ ಕುಲಾಲ್ ಉಪಸ್ಥಿತರಿದ್ದರು.
ಸದಸ್ಯ ಸುಧಾಕರ ಸಾಲ್ಯಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ಕೋಶಾಧಿಕಾರಿ ಎ. ದಾಮೋದರ್ ವಂದಿಸಿದರು.