ತುಂಬೆ ಗ್ರಾಮ ಪಂಚಾಯತ್ ಅಶ್ರಯದಲ್ಲಿ ಮಕ್ಕಳ ಗ್ರಾಮ ಸಭೆಯು ಪಂಚಾಯತ್ ಸಭಾಂಗಣ

ಬಂಟ್ವಾಳ: ತುಂಬೆ ಗ್ರಾಮ ಪಂಚಾಯತ್ ಅಶ್ರಯದಲ್ಲಿ ಮಕ್ಕಳ ಗ್ರಾಮ ಸಭೆಯು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷರಾಗಿ ಕುನಿಲ್ ಶಾಲೆಯ ಮೊಹಮ್ಮದ್ ವಿದ್ಯಾರ್ಥಿ ಹಮ್ದನ್ ವಹಿಸಿದ್ದರು. ಉಪಾಧ್ಯಕ್ಷರಾಗಿ ಬಿ. ಎ. ಶಾಲಾ ವಿದ್ಯಾರ್ಥಿನಿಯಾದ ಮುಜೈನ ಶಮ ಉಪಸ್ಥಿತರಿದ್ದರು. ಸಾಂತ್ವಾನ ಕೇಂದ್ರದ ವಿದ್ಯಾಕುಮಾರಿ ಅವರು ಮಕ್ಕಳಿಗೆ ಹಕ್ಕು ಮತ್ತು ರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಜಯಂತಿ ಕೇಶವ, ಉಪಾಧ್ಯಕ್ಷರಾದ ಗಣೇಶ್ ಸಾಲಿಯಾನ್ ಹಾಗೂ ನಿಕಟ ಪೂರ್ವ ಅಧ್ಯಕ್ಷರಾದ ಪ್ರವೀಣ್ ಬಿ ತುಂಬೆ, ಪಂಚಾಯತ್ ಸದಸ್ಯರಾದ ಮಹಮ್ಮದ್ ಝಹೂರ್, ಮಹಮದ್ ಇಬ್ರಾಹಿಂ, ಜಯಂತಿ ನಾಗೇಶ್ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವುಲಾಲ್ ಚೌಹಾನ್ , ಲೆಕ್ಕ ಸಹಾಯಕರಾದ ಶ ಚಂದ್ರಕಲಾಜಿ ,ಬಿ ಎ. ಶಾಲೆಯ ದೈಹಿಕ ಶಿಕ್ಷಕರಾದ ಜಗದೀಶ್ ರೈ, ತುಂಬೆ ಸರಕಾರಿ ಶಾಲೆಯ ಶಿಕ್ಷಕರಾದ ದೇವಿ, ವಳವೂರು ಶಾಲೆಯ ಶಿಕ್ಷಕರಾದ ಅಸ್ಮತ್ ಕೆ ಬಾನು , ಕುನಿಲ್ ಶಾಲೆಯ ಶಿಕ್ಷಕರಾದ ಶಿಲ್ಪ ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.