ಸಂಗಬೆಟ್ಟಿಗೆ 9.40ಲಕ್ಷ ರೂ. ಮೊತ್ತದ ವಿವಿಧ ಕೊಡುಗೆ ನೀಡಿದ ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್

ಬಂಟ್ವಾಳ: ಕಳೆದ ಆರು ವರ್ಷಗಳ ಹಿಂದೆ ಆರಂಭಗೊಂಡು ಒಂದೇ ವರ್ಷದೊಳಗೆ ಸ್ವಂತ ಕಟ್ಟಡ ನಿರ್ಮಿಸಿ ಗರಿಷ್ಟ ಮಂದಿ ಸದಸ್ಯರನ್ನು ಹೊಂದಿರುವ ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ಸಂಗಬೆಟ್ಟು ಗ್ರಾಮದ ಕಲ್ಕುರಿ ಪದವು ಎಂಬಲ್ಲಿ ಶಾಂತಾ ಬಾಲಕೃಷ್ಣ ನಾಯ್ಕ ದಂಪತಿಗೆ ಸುಸಜ್ಜಿತ ಮನೆ ನಿರ್ಮಾಣಕ್ಕೆ ನೆರವು ಸೇರಿದಂತೆ ವಿವಿಧ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ 9.40ಲಕ್ಷ ರೂ. ಮೊತ್ತದ ವಿವಿಧ ಕೊಡುಗೆ ಸಲ್ಲಿಸಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ವಿಕ್ರಂ ದತ್ತ ಹೇಳಿದರು.
ಬಂಟ್ವಾಳ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ಬಿಗೆ ಶನಿವಾರ ಅಧಿಕೃತ ಭೇಟಿ ನೀಡಿ ವಿವಿಧ ಸಾಮಾಜಿಕ ಕೊಡುಗೆ ಉದ್ಘಾಟಿಸಿದ ಬಳಿಕ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕ್ಲಬ್ಬಿನ ಅಧ್ಯಕ್ಷ ಸುರೇಶ ಶೆಟ್ಟಿ ಸಿದ್ಧಕಟ್ಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಕ್ಲಬ್ಬಿನ ಹಲವು ಸದಸ್ಯರ ನೆರವಿನಿಂದ ಸಾಮಾಜಿಕ ಕೊಡುಗೆ ಸಾಧ್ಯವಾಗಿದೆ’ ಎಂದರು.
ಇದೇ ವೇಳೆ ಅಗ್ರಾರ್ ಆಂಗ್ಲ ಮಾಧ್ಯಮ ಶಾಲೆಗೆ ರೂ 60ಸಾವಿರ ಮೊತ್ತದ ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರ, ಆರಂಬೋಡಿ ಸಕರ್ಾರಿ ಪ್ರಾಥಮಿಕ ಶಾಲೆಗೆ ರಂಗ ಮಂದಿರ ಕೊಡುಗೆ, ಸಿದ್ಧಕಟ್ಟೆ ಸಕರ್ಾರಿ ಪ್ರೌಢಶಾಲೆ ರಂಗಮಂದಿರ ನಿಮರ್ಾಣಕ್ಕೆ ರೂ 65ಸಾವಿರ ನೆರವು, ಸಕರ್ಾರಿ ಪದವಿಪೂರ್ವ ಕಾಲೇಜಿನ ಪ್ರಯೋಗಾಲಯ ಕೊಠಡಿಗೆ ರೂ 25ಸಾವಿರ, ಟೈಲರಿಂಗ್ ತರಬೇತಿ ಶಿಕ್ಷಕಿಗೆ ರೂ 20 ಸಾವಿರ ಗೌರವಧನ, ಹೆಣ್ಣೂರುಪದವು ಅಂಗನವಾಡಿ ಕೇಂದ್ರ ನವೀಕರಣಕ್ಕೆ ರೂ 50 ಸಾವಿರ, ಹೆಣ್ಣೂರುಪದವು ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆಗೆ ರೂ 15ಸಾವಿರ ಮೊತ್ತದ ಕುಡಿಯುವ ನೀರಿನ ಶುದ್ಧೀಕರಣ ಘಟಕ, ಇಬ್ಬರು ಕ್ಯಾನ್ಸರ್ ಪೀಡಿತರಿಗೆ ತಲಾ ರೂ 30 ಸಾವಿರ ಮೊತ್ತದ ನೆರವು ವಿತರಿಸಲಾಯಿತು.
ಸಹಾಯಕ ಗವರ್ನರ್ ಡಾ.ಮುರಳಿಕೃಷ್ಣ ಆರ್.ವಿ., ಮಾಜಿ ಗವರ್ನರ್ ಎನ್.ಪ್ರಕಾಶ ಕಾರಂತ್, ವಲಯ ಸೇನಾನಿ ಗಣೇಶ ಶೆಟ್ಟಿ ಆರಂಬೋಡಿ, ಕ್ಲಬ್ಬಿನ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್ ಮತ್ತಿತರರಿದ್ದರು.ಕಾರ್ಯದರ್ಶಿ ರಾಜೇಶ ಶೆಟ್ಟಿ ಸೀತಾಳ ವಂದಿಸಿದರು. ಮಾಜಿ ಸಹಾಯಕ ಗವರ್ನರ್ ರಾಘವೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.