ಬಂಟ್ವಾಳ: ಭಂಡಾರಿ ಸಮಾಜ ಸಂಘದ ವಾರ್ಷಿಕ ಮಹಾಸಭೆ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಗೆ ಸನ್ಮಾನ
ಬಂಟ್ವಾಳ:ಇಲ್ಲಿನ ಭಂಡಾರಿ ಸಮಾಜ ಸಂಘದ ವಾರ್ಷಿಕ ಮಹಾಸಭೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಭಾನುವಾರ ನಡೆಯಿತು. ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಅಧ್ಯಕ್ಷ ಲಕ್ಷ್ಮಣ್ ಕರಾವಳಿ ಕಾರ್ಯಕ್ರಮ ಉದ್ಘಾಟಿಸಿದರು. ಭಂಡಾರಿ ಸಮಾಜವನ್ನು ಹಿಂದುಳಿದ ವರ್ಗ 2 (ಎ) ಯಿಂದ ಪ್ರವರ್ಗ-1ಕ್ಕೆ ವರ್ಗಾಯಿಸಬೇಕು ಎಂದು ಆಗ್ರಹಿಸಿ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಇವರನ್ನು ಸನ್ಮಾನಿಸಲಾಯಿತು. ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಶುಭ ಹಾರೈಸಿದರು.ಭಂಡಾರಿ ಮಹಾಮಂಡಲ ಅಧ್ಯಕ್ಷ ಶಶಿಧರ್ ಕಾರ್ಕಳ, ಡಾ. ಧನ್ವಿಶ್ ಕಲ್ಲಡ್ಕ, ಮಂಗಳೂರು ಸಂಘದ ಅಧ್ಯಕ್ಷ ಮುರಳೀಧರ ಭಂಡಾರಿ, ಕಾರ್ಕಳ ಸಂಘದ ಅಧ್ಯಕ್ಷ ಶೇಖರ್ ಎಚ್., ಉಡುಪಿ ಸಂಘದ ಅಧ್ಯಕ್ಷ ಗುರುದಾಸ್ ಭಂಡಾರಿ, ಉದ್ಯಮಿ ಮಾಧವ ಭಂಡಾರಿ ಸಾಗರ, ಬಾಲಕೃಷ್ಣ ಭಂಡಾರಿ ಪೂನಾ, ಪ್ರತಾಪ್ ಭಂಡಾರಿ ಈಶ್ವರ ಕಟ್ಟೆ ಮಾತನಾಡಿದರು.
ಸಂಘದ ಅಧ್ಯಕ್ಷ ಗೋಪಾಲ ಭಂಡಾರಿ ಕಕ್ಯಪದವು, ಗೌರವಾಧ್ಯಕ್ಷ ದಿವಾಕರ ಶಂಭೂರು, ಯುವ ವೇದಿಕೆ ಅಧ್ಯಕ್ಷ ರಮೇಶ್ ಭಂಡಾರಿ ಮೈರನ್ ಪಾದೆ, ಮಹಿಳಾ ಸಂಘದ ಅಧ್ಯಕ್ಷೆ ಸುಜಾತ ಜಗದೀಶ್ ಭಂಡಾರಿ ಮತ್ತಿತರರು ಇದ್ದರು. ಇದೇ ವೇಳೆ ದಾನಿ ಬಾಲಕೃಷ್ಣ ಭಂಡಾರಿ ಪುತ್ತೂರು, ರಂಗಭೂಮಿ ನಟ ಪ್ರಕಾಶ್ ತೂಮಿನಾಡು, ದಯಾನಂದ ಭಂಡಾರಿ ಹೊಕ್ಕಾಡಿಗೋಳಿ, ಕೃಷಿಕ ಸುಂದರ ಭಂಡಾರಿ ರಾಯಿ, ಬಂಟ್ವಾಳ ವ್ಯವಸಾಯ ಸಹಕಾರಿ ಸಂಘದ ನಿರ್ದೇ ಶಕ ಚಂದ್ರಶೇಖರ ಭಂಡಾರಿ ಮಂಡಾಡಿ, ಹಿರಿಯ ಕ್ಷೌರಿಕ ಮೋಹನ್ ಭಂಡಾರಿ, ಸಮಾಜ ಸೇವಕ ಬಾಬು ಭಂಡಾರಿ, ಕ್ರೀಡಾ ಸಾಧಕ ಪ್ರೀತಲ್ ಡಿ.ವಿ. ಇವರನ್ನು ಸನ್ಮಾನಿಸಲಾಯಿತು.
ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಅನ್ವಿತ್ ಎಸ್. ನಂದೊಟ್ಟು, ಪ್ರತೀಕ್ ಭಂಡಾರಿ, ಅನುಷಾ ಬಾಳ್ತಿಲ, ಭೂಷನ್ ಭಂಡಾರಿ, ರಿಷಿಕಾ, ರಶ್ಮಿತಾ, ಅಂಕಿತಾ, ಹರ್ಷ ಜ್ಯೋತಿಇವರನ್ನು ಗೌರವಿಸಲಾಯಿತು.
ಸದಾಶಿವ ಭಂಡಾರಿ ನಂದೊಟ್ಟು ಸ್ವಾಗತಿಸಿ, ಹೇಮಚಂದ್ರ ಭಂಡಾರಿ ಕೈರಂಗಳ ವಾರ್ಷಿಕ ವರದಿ ಮಂಡಿಸಿದರು. ಶ್ರೀಕಾಂತ್ ಭಂಡಾರಿ ಪಾಣೆಮಂಗಳೂರು ವಂದಿಸಿದರು. ನಿವೃತ್ತ ಉಪನ್ಯಾಸಕ ಪ್ರೊ.ನಾರಾಯಣ ಭಂಡಾರಿ, ದಿವ್ಯಾ ಭಾಸ್ಕರ್, ಕಾವ್ಯ ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು.