ಕಂಬಳ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ ಸಮಿತಿ ಮಹತ್ವದ ಸಾಧನೆ

ಬಂಟ್ವಾಳ: ಜಿಲ್ಲೆಯ ಕಂಬಳ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ ಸಮಿತಿ ವತಿಯಿಂದ ವಿವಿಧ ಸರಕಾರಿ ಶಾಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ 1ಲಕ್ಷಕ್ಕೂ ಅಧಿಕ ಮೊತ್ತದ ದೇಣಿಗೆ ನೀಡಿ ಇತರರಿಗೆ ಮಾದರಿಯಾಗಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ ಹೇಳಿದ್ದಾರೆ.
ಸಿದ್ಧಕಟ್ಟೆ ಹೋಟೆಲ್ ಅಶ್ವಿನಿ ಸಭಾಂಗಣದಲ್ಲಿ ನಡೆದ ಪ್ರಸಕ್ತ ಸಾಲಿನ ಕಂಬಳದ ಲೆಕ್ಕಪತ್ರ ಮಂಡನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗೌರವ ಸಲಹೆಗಾರರಾದ ವಾಮದಪದವು ವಲಯ ಬಂಟರ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ, ಲೊರೆಟ್ಟೊಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷ ವಕೀಲ ಸುರೇಶ ಶೆಟ್ಟಿ ಸಿದ್ಧಕಟ್ಟೆ, ಉದ್ಯಮಿ ಕಿರಣ್ ಕುಮಾರ್ ಮಂಜಿಲ, ಕಂಬಳ ಕೋಣಗಳ ಯಜಮಾನ ಬಾಬು ರಾಜೇಂದ್ರ ಶೆಟ್ಟಿ ವಿವಿಧ ಸಲಹೆ ನೀಡಿದರು. ಇದೇ ವೇಳೆ ಸಮಿತಿ ಕೋಶಾಧಿಕಾರಿ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ ಲೆಕ್ಕಪತ್ರ ಮಂಡಿಸಿದರು.
ಪದಾಧಿಕಾರಿಗಳಾದ ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ರಾಜೇಶ ಶೆಟ್ಟಿ ಕೊನೆರೊಟ್ಟು, ಜನಾರ್ದನ ಬಂಗೇರ ತಿಮರಡ್ಕ, ಸಂದೇಶ ಶೆಟ್ಟಿ ಪುಡುಂಬ, ಉಮೇಶ ಶೆಟ್ಟಿ ಕೊನೆರೊಟ್ಟು, ಸ್ಥಳದಾನಿ ಚಂದ್ರಶೇಖರ ಪೂಜಾರಿ, ಉಮೇಶ ಹಿಂಗಾಣಿ, ನವೀನ್ ಹೆಗ್ಡೆ ಮಂಚಕಲ್, ಮಧುಸೂಧನ ಸಾಲ್ಯಾನ್, ದೇವರಾಜ್ ಸಾಲ್ಯಾನ್ ಮತ್ತಿತರರು ಇದ್ದರು. ಸಮಿತಿ ಪ್ರಧಾನ ಕಾರ್ಯದರ್ಶಿ ಶಶಿಧರ ಶೆಟ್ಟಿ ಕಲ್ಲಾಪು ಸ್ವಾಗತಿಸಿ, ವಂದಿಸಿದರು.