ಕೃಷಿ ಇಲಾಖೆ ಹಾಗೂ ತಾಲೂಕು ಕೃಷಿಕ ಸಮಾಜದ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ

ಬಂಟ್ವಾಳ: ಕೃಷಿ ಇಲಾಖೆ ಹಾಗೂ ತಾಲೂಕು ಕೃಷಿಕ ಸಮಾಜದ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ ತಾಲೂಕು ಕೃಷಿಕ ಸಮಾಜದ ಪದ್ಮರಾಜ್ ಬಲ್ಲಾಳ್ ಮಾವಂತೂರು ಅವರ ಅಧ್ಯಕ್ಷತೆಯಲ್ಲಿ ಬಂಟ್ವಾಳ ತಾ.ಪಂ.ನ ಎಸ್ ಜಿಎಸ್ ಎಸ್ ವೈ ಸಭಾಂಗಣದಲ್ಲಿ ನಡೆಯಿತು.
ಕೃಷಿಕ ಸಮಾಜ ರಾಜ್ಯ ಪ್ರತಿನಿಧಿ ಪದ್ಮನಾಭ ರೈ ಗೋಳ್ತಮಜಲು, ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಬಿ ಉಮ್ಮರ್ ಮಂಚಿ, ತಾಲೂಕು ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕರಾದ ಪ್ರದೀಪ್ ಡಿ ಸೋಜ, ತಸಹಾಯಕ ಕೃಷಿ ನಿರ್ದೇಶಕರಾದ ವೀಣಾ ಕೆ.ಆರ್ ಹಾಗೂ ಕೃಷಿ ಅಧಿಕಾರಿಯಾದ ನಂದನ್ ಶೆಣೈ ಪಿ, ಮಹಿಳಾ ರೈತ ಉತ್ಪಾದಕಾ ಸಂಘದ ಸಿಇಓ ನವ್ಯ ಹೊಳ್ಳ ಹಾಜರಿದ್ದರು.
ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಹೋಬಳಿವಾರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಮಣಿನಾಲ್ಕೂರು ಗ್ರಾಮದ ಕೃಷಿ ಸಖಿ ನಳಿನಾಕ್ಷಿ ಬಾಳ್ತಿಲ ಗ್ರಾಮದ ಕೃಷಿ ಸಖಿ ಗುಲಾಬಿ, ಕೊಳ್ಳಾಡು ಗ್ರಾಮದ ಕೃಷಿ ಸಖಿ ಸುಜಾತ ಹಾಗೂ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಮೊದಲು ಮುಗಿಸಿದ ಬುಡೋಳಿ ಗ್ರಾಮದ ಅನಿಲ್ ಹೆಗ್ಡೆ, ಬಾಳ್ತಿಲ ಗ್ರಾಮದ ನಾಗೇಶ್ ಹಾಗೂ ವಿಟ್ಲಮೂಡೂರು ಗ್ರಾಮದ ಪ್ರತೀಕ್ ಇವರನ್ನು ಸನ್ಮಾನ ಮಾಡಲಾಯಿತು.
ಕೃಷಿ ಇಲಾಖೆಯ ವಿವಿಧ ಯೋಜನೆಯಡಿಯಲ್ಲಿ ಹುಲ್ಲು ತೆಗೆಯುವ ಯಂತ್ರ ಹಾಗೂ ಔಷಧಿ ಸಿಂಪಡಿಸುವ ಯಂತ್ರ, ಟರ್ಪಾಲ್ ಹಾಗೂ ತುಂತುರು ನೀರಾವರಿ ಘಟಕಗಳನ್ನು ಆಯ್ದ ರೈತರಿಗೆ ಸ ವಿತರಿಸಲಾಯಿತು.
2024-25ನೇ ಸಾಲಿನ ಕೃಷಿ ಭಾಗ್ಯ ಯೋಜನೆಯ ಕೃಷಿ ಹೊಂಡ ನಿರ್ಮಾಣದ ಕುರಿತು ಮಾಹಿತಿ ನೀಡಲಾಯಿತು.