ಮೂಡುಬಿದರೆ: ದೈಹಿಕ ಶಿಕ್ಷಣ ಹಾಗೂ ಸೇನಾ ನೇಮಕಾತಿ ಚಟುವಟಿಕೆಗಳು ಒಂದಕ್ಕೊಂದು ಪೂರಕ. ದೈಹಿಕ ಶಿಕ್ಷಣದ ಜೊತೆಗೆ ದೈಹಿಕ ಶಿಕ್ಷಣ ಶಿಕ್ಷಕರು ವಿದ್ಯಾಥರ್ಿಗಳಲ್ಲಿ ಸೇನಾ ಅವಕಾಶಗಳ ಬಗ್ಗೆ ಮನವರಿಕೆ ಮಾಡಬೇಕು. ದೈಹಿಕ ಶಿಕ್ಷಣದಿಂದ ಸೇನಾ ಜಾಗೃತಿ ಸಾಧ್ಯ ಎಂದು ದ.ಕ ಜಿಲ್ಲಾ ಮುಖ್ಯ ಕಾರ್ಯನಿವರ್ಾಹಣಾ ಅಧಿಕಾರಿ ತುಳಸಿ ಮದ್ದಿನೇನಿ ತಿಳಿಸಿದರು.
mbd_dec8_1
ವಿದ್ಯಾಗಿರಿಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಸೋಮವಾರ ದ.ಕ ಜಿಲ್ಲೆಯ ದೈಹಿಕ ಶಿಕ್ಷಕರಿಗೆ ಏರ್ಪಡಿಸಿದ `ಭಾರತೀಯ ಸೇನಾ ಅವಕಾಶ ಬಗ್ಗೆ ಜಾಗೃತಿ’ ಕಾಯರ್ಾಗಾರವನ್ನು ಉದ್ಘಾಟಿಸಿದರು. ಭಾರತೀಯ ಸೇನೆಗಳಲ್ಲಿ ವಿಫುಲ ಅವಕಾಶವಿದೆ. ಸೇನೆ ನೈಜ್ಯ ದೇಶಭಿಮಾನದ ಪ್ರತೀಕ ಎಂದರು.
ಮಂಗಳೂರು ವಿಭಾಗೀಯ ಸೇನಾ ನೇಮಕಾತಿ ಅಧಿಕಾರಿ ಕರ್ನಲ್ ವಿಶ್ವನಾಥ್ ಕಾಯರ್ಾಗಾರ ಸಂಪನ್ಮೂಲ ವ್ಯಕ್ತಿಯಾಗಿದ್ದರು. ದೈಹಿಕ ಶಿಕ್ಷಕರು ಸೇನಾ ಜಾಗೃತಿ ಹೇಗೆ ಉಂಟು ಮಾಡಬಹುದು ಎಂಬುದರ ಬಗ್ಗೆ ತಿಳಿಸಿದರು. ಭಾರತೀಯ ಸೇನೆ ವಿಶ್ವದಲ್ಲೇ ಉತ್ಕೃಷ್ಠ ಮಾನವ ಸಂಪನ್ಮೂಲ ಹೊಂದಿದೆ. ದೈಹಿಕ ಶಿಕ್ಷಕರು ವಿದ್ಯಾಥರ್ಿಗಳಿಗೆ ಪ್ರೇರಣೆ ನೀಡಿದರೆ ಹೆಚ್ಚಿನ ಸೈನಿಕರು ಸೇನೆಗೆ ಲಭಿಸುತ್ತಾರೆ ಎಂದರು.
ದ.ಕ ಜಿಲ್ಲಾ ವಿದ್ಯಾಂಗ ಉಪನಿದರ್ೇಶಕ ವಾಲ್ಟರ್ ಡಿ’ಮೆಲ್ಲೊ, ದ.ಕ. ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಜೋಸೆಫ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಆಡಳಿತಾಧಿಕಾರಿ ಸ್ಮಿತಾ ಐತಾಳ್ ಉಪಸ್ಥಿತರಿದ್ದರು. ಡಾ.ಉದಯ್ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.
ದ.ಕ. ಜಿಲ್ಲಾ ಪಂಚಾಯಿತಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ದ.ಕ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಪ್ರೌಢಶಾಲೆಯ ದೈಹಿಕ ಶಿಕ್ಷಕರು ಭಾಗವಹಿಸಿದರು.

By suddi9

Leave a Reply

Your email address will not be published. Required fields are marked *