ಬಂಟ್ವಾಳ: 20 ರಿಂದ ಜ. 26 ರ ವರೆಗೆ ಬಂಟ್ವಾಳದಲ್ಲಿ “ಕರಾವಳಿ ಕಲೋತ್ಸವ 2024-25”
![](https://www.suddi9.com/wp-content/uploads/2024/12/WhatsApp-Image-2024-12-18-at-3.26.51-AM-650x246.jpeg)
ಬಂಟ್ವಾಳ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ), ಬಂಟ್ವಾಳ ಹಾಗೂ ಚಿಣ್ಣರ ಲೋಕ ಸೇವಾ ಬಂಧು (ರಿ) ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ “ಕರಾವಳಿ ಕಲೋತ್ಸವ 2024-25” ಮತ್ತು ಕರ್ನಾಟಕ ಸುವರ್ಣ ಸಂಭ್ರಮದ ಪ್ರಯುಕ್ತ ಬಹು ಸಂಸ್ಕೃತಿ ಸಂಭ್ರಮವು ಡಿ.20 ರಿಂದ ಜ. 26 ರ ವರೆಗೆ
ಬಿ.ಸಿ.ರೋಡು ವೃತ್ತ ಬಳಿಯ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಪ್ರಧಾನ ಸಂಚಾಲಕರಾದ ಮೋಹನದಾಸ್ ಕೊಟ್ಟಾರಿ ತಿಳಿಸಿದ್ದಾರೆ.
ಮಂಗಳವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಲಾ ವೇದಿಕೆಗೆ ಕೀರ್ತಿಶೇಷ ರಘ ಸಪಲ್ಯ ಮೊಗರ್ನಾಡು ಹಾಗೂ ಸಭಾಂಗಣಕ್ಕೆ ಯುವ ಪತ್ರಕರ್ತ ದಿ. ಫಾರೂಕ್ ಗೂಡಿನಬಳಿ ಅವರ ಹೆಸರನ್ನು ಇರಿಸಲಾಗಿದೆ ಎಂದರು. “ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ)” ಸಂಸ್ಥೆಯು ಕೇವಲ ಬಂಟ್ವಾಳ ತಾಲೂಕಿಗೆ ಮಾತ್ರವಲ್ಲ ಜಿಲ್ಲೆಯಾದ್ಯಂತ ಹಲವು ಕಡೆಗಳಲ್ಲಿ ತನ್ನ ಶಾಖೆಯನ್ನು ಹೊಂದಿದ್ದು, ಈ ಮೂಲಕ ಹತ್ತು ಹಲವು ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಜತೆಗೆ ನುರಿತ ವಿಷಯ ಪರಿಣಿತರಿಂದ ಎಳೆಯ ಮಕ್ಕಳಿಗೆ
ಸಾಂಸ್ಕೃತಿಕ, ಶೈಕ್ಷಣಿಕ,ಸಾಮಾಜಿಕ ಬೆಳವಣಿಗೆಗೆ ಪೂರಕವಾಗಿ ತರಬೇತಿ ನೀಡುತ್ತಾ ಬರುತ್ತಿದೆ ಎಂದರು.
ಡಿ.20 ರಂದು ಸಂಜೆ 5 ಗಂಟೆಗೆ ಬಿ.ಸಿ.ರೋಡು ಶ್ರೀ ಅನ್ನಪೂರ್ಣೇಶ್ವರೀ ಕಲಾ ಮಂಟಪದಿಂದ ಜಾನಪದ ದಿಬ್ಬಣದ ಮೆರವಣಿಗೆಯು ಜಾನಪದ ತಂಡಗಳೊಂದಿಗೆ ಬಿ. ಸಿ. ರೋಡಿನ ಗೋಲ್ಡನ್ ಪಾರ್ಕ್ ಮೈದಾನಕ್ಕೆ ಸಾಗಿ ಬರಲಿದೆ ಎಂದು ಮೋಹನದಾಸ್ ಕೊಟ್ಟಾರಿ ವಿವರಿಸಿದರು. ಬಳಿಕ ಕಲಾ ವೇದಿಕೆ, ಸಭಾಂಗಣ ಉದ್ಘಾಟನೆ, ಅಮ್ಯೂಸ್‌ಮೆಂಟ್ ಪಾರ್ಕ್ ಹಾಗೂ ವಿವಿಧ ಮಳಿಗೆಗಳ ಉದ್ಘಾಟನೆ ನಡೆಯಲಿದೆ. ಉದಯ ಚೌಟ ಸಾಧನ ಪ್ರಶಸ್ತಿ , ಚಿಣ್ಣರ ಸೌರಭ ರಾಜ್ಯ ಪ್ರಶಸ್ತಿ ಪ್ರದಾನ ನಡೆಯಲಿದೆ.ಸಂಸದ ಕ್ಯಾ.ಬ್ರಿಜೇಶ್ ಚೌಟ,ಶಾಸಕರಾದ ರಾಜೇಶ್ ನಾಯ್ಕ್,ಮಂಜುನಾಥ ಭಂಡಾರಿ,ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಮಾಜಿ ಸಚಿವ ರಮಾನಾಥ ರೈ, ಮಾಣಿಲ ಶ್ರೀಧಾಮದ ಮೋಹನದಾಸ್ ಸ್ವಾಮೀಜಿ, ಮೊಡಂಕಾಪು ಚಚ್ ೯ನ ಧರ್ಮಗುರು ವಲೇರಿಯನ್ ಡಿಸೋಜ,ಮಿತ್ತಬೈಲ್ ಜಝರಿ ಇರ್ಷಾದ್ ಹುಸೈನ್ ದಾರಿಮಿ ಮೊದಲಾದ ಗಣ್ಯರು ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಕರಾವಳಿ ಉತ್ಸವ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ತಿಳಿಸಿದರು.
ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ
ಮಕ್ಕಳ ಚಿಣ್ಣರೋತ್ಸವ, ನಾಟಕೋತ್ಸವ, ರಾಜ್ಯ ಮಟ್ಟದ ಫಿಲ್ಲಿ ಡ್ಯಾನ್ಸ್ ಸ್ಪರ್ಧೆ, ಜಿಲ್ಲಾ ಮಟ್ಟದ ಸಿಂಗಾರಿ ಮೇಳ (ಚೆಂಡೆ) ಸ್ಪರ್ಧೆ, ಜಾನಪದ ನೃತ್ಯ ಭರತನಾಟ್ಯ, ಯಕ್ಷಗಾನ,ಪಿಲ್ಮಿಡ್ಯಾನ್ಸ್ ,ರಸ್ತೆ ಸುರಕ್ಷಾ ಮಾಹಿತಿ ಮೊದಲಾದ ವೈವಿಧ್ಯಮಯ ಕಾರ್ಯಕ್ರಮಗಳು ಜ.5 ರವರೆಗೆ ಪ್ರತಿದಿನ ನಡೆಯಲಿದ್ದರೆ ಮತ್ತೊಂದೆಡೆ ಅಮ್ಯೂಸ್ ಮೆಟಂಟ್ ಪಾಕ್೯ ಗಳು ಜ.26 ರ ವರೆಗೆ ಮುಂದುವರಿಯಲಿದ್ದು, ಜನರನ್ನು ರಂಜಿಸಲಿದೆ ಎಂದರು.
ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.)ದ ಅಧ್ಯಕ್ಷ ಡಾ.ಮೋಹನ್ ಅಳ್ವರು “ಕರಾವಳಿ ಸೌರಭ ” ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಡಿ. 30 ರಂದು ಸಂಜೆ 6ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಮತ್ತು ತುಳು, ಬ್ಯಾರಿ, ಕೊಂಕಣಿ, ಅರೆಭಾಷೆ, ಕೊಡವ ಮತ್ತು ಯಕ್ಷಗಾನ ಅಕಾಡೆಮಿ ಇವರ ಸಹಯೋಗದೊಂದಿಗೆ ‘ಚಿಣ್ಣರಲೋಕ’ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ.) ಬಂಟ್ವಾಳ ಮತ್ತು ಚಿಣ್ಣರಲೋಕ ಸೇವಾ ಬಂಧು (ರಿ.) ಬಂಟ್ವಾಳ ಇವರ ಜಂಟಿ ಆಶ್ರಯದಲ್ಲಿ “ಬಹುಸಂಸ್ಕೃತಿ ಸಂಭ್ರಮ ಮತ್ತು ಬಹುಭಾಷಾ ಕವಿ ಸಂಗಮ ನಡೆಯಲಿದೆ.
ಜ.05 ರಂದು ಸಂಜೆ 6.00ಕ್ಕೆ ಸಮಾರೋಪ ಸಮಾರಂಭ ಬಳಿಕ “ಶನಿ ಮಹಾತ್ಮ” ಪೌರಾಣಿಕ ನಾಟಕ ನಡೆಯಲಿದೆ ಎಂದು ತಿಳಿಸಿದರು. ಇನ್ನು ಸುದ್ದಿಗೋಷ್ಟಿಯಲ್ಲಿ ಸಮಿತಿ ಪದಾಧಿಕಾರಿಗಳಾದ ತಾರನಾಥ ಕೊಟ್ಟಾರಿ ತೇವು,ಸರಪಾಡಿ ಅಶೋಕ್ ಶೆಟ್ಟಿ,ಪೌಝಿಯಾ,ಶಿವಪ್ರಸಾದ್ ಬಂಟ್ವಾಳ,ಇಬ್ರಾಹಿಂ ಕೈಲಾರ್ ಮೊದಲಾದವರಿದ್ದರು.