ಕೈಕಂಬ:ನಾಡು ನುಡಿ ಕಲೆ ಸಾಹಿತ್ಯ ಜನಪದ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಾಧಕರಿಗೆ ಕಲಾಭೂಮಿ ಪ್ರತಿಷ್ಠಾನ ಬೆಂಗಳೂರು ವತಿಯಿಂದ ನೀಡುವ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ – 2024 ಮಂಗಳೂರು ತಾಲೂಕಿನ ತೆಂಕುಳಿಪಾಡಿ ಗ್ರಾಮದ ಕಾಜಿಲ ನಿವಾಸಿ ರಿತೇಶ್ ಕಾಜಿಲ ಇವರಿಗೆ ಲಭಿಸಿದೆ.

ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ತನ್ನ ಹೊಟ್ಟೆಪಾಡಿನ ಕೆಲಸದ ಜೊತೆ ರಂಗಭೂಮಿ,ಧಾರ್ಮಿಕ ಮತ್ತು ಯಕ್ಷಗಾನ ಕ್ಷೇತ್ರದಲ್ಲಿನ ನಿಸ್ವಾರ್ಥವಾದ ಗಣನೀಯ ಸೇವೆಯನ್ನು ಮನಗೊಂಡು ಕಲಾಭೂಮಿ ಪ್ರತಿಷ್ಠಾನ ಬೆಂಗಳೂರು ಇವರು ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ನವೆಂಬರ್ 29 ತಾರೀಕಿನಂದು ಪ್ರಶಸ್ತಿಯನ್ನು ಕೊಟ್ಟು ಗೌರವಿಸಿರುತ್ತಾರೆ.

