Published On: Sat, Nov 23rd, 2024

ಸಿದ್ಧಕಟ್ಟೆ: ಕೊಡಂಗೆ ವೀರ-ವಿಕ್ರಮ ಜೋಡುಕರೆ ಕಂಬಳಕ್ಕೆ ಚಾಲನೆ ‘ಗ್ರಾಮೀಣ ಕಂಬಳಕ್ಕೆ  ಅಂತರ್ ರಾಷ್ಟ್ರೀಯ ಮನ್ನಣೆ’  : ಪೂಂಜ ಪ್ರಕಾಶ್ ಆಚಾರ್ಯ

ಬಂಟ್ವಾಳ:ಗ್ರಾಮೀಣ ಕೃಷಿಕರು ಮನೋರಂಜನೆ ಗಾಗಿ ಆರಂಭಿಸಿದ ಕಂಬಳ ಕ್ರೀಡೆ ಪ್ರಸಕ್ತ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸುತ್ತಿದೆ ಎಂದು ಪೂಂಜ ಕ್ಷೇತ್ರದ ಪ್ರಧಾನ ಅರ್ಚಕ ಪ್ರಕಾಶ್ ಆಚಾರ್ಯ ಹೇಳಿದರು.ಇಲ್ಲಿನ ಸಿದ್ಧಕಟ್ಟೆ ಸಮೀಪದ ಕೊಡಂಗೆ ಎಂಬಲ್ಲಿ ಶನಿವಾರ ಆರಂಭಗೊಂಡ 2 ನೇ ವರ್ಷದ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ ಉದ್ಘಾಟಿಸಿ ಅವರು ಮಾತನಾಡಿದರು.  ಪೂಂಜ ಕ್ಷೇತ್ರದ ಆಸ್ರಣ್ಣ ಕೃಷ್ಣಪ್ರಸಾದ್ ಆಚಾರ್ಯ ಆಶೀರ್ವಚನ ನೀಡಿದರು.


ಕುಡುಂಬೂರುಗುತ್ತು ಕ್ಷೇತ್ರದ ಆಡಳಿತ ಮೊಕ್ತೇಸರ ಗುತ್ತಿನಾರ್ ಜಯರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ಶಿವಮೊಗ್ಗ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಎಲಿಯಾಸ್ ಸ್ಯಾಂಕ್ಟಿಸ್, ಸಿದ್ಧಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರತ್ನಕುಮಾರ್ ಚೌಟ, ಸಿದ್ಧಕಟ್ಟೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಪ್ರಭಾಕರ ಪ್ರಭು, ಸಿದ್ದಕಟ್ಟೆ ಹಿರಿಯ ವೈದ್ಯ ಡಾ. ಪ್ರಭಾಚಂದ್ರ ಜೈನ್,
ವೈದ್ಯ ಡಾ.ಸುದೀಪ್ ಕುಮಾರ್ ಜೈನ್ , ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್, ಸಂಗಬೆಟ್ಟು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ ಅಳಕೆ, ಮೈಸೂರು ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ಜಿ. ಪಂ. ಮಾಜಿ ಸದಸ್ಯ ಕೆ.ಪಿ.ಜಗದೀಶ್ ಅಧಿಕಾರಿ, ಶುಭ ಹಾರೈ ಸಿದರು.


  ಜಿಲ್ಲಾ ಕಂಬಳ ಸಮಿತಿ ಮಾಜಿ ಅಧ್ಯಕ್ಷ ಪಿ. ಆರ್. ಶೆಟ್ಟಿ ಕುಳೂರು, ಉದ್ಯಮಿಗಳಾದ ಎಲ್ಲೂರು ಅನಿಲ್ ಶೆಟ್ಟಿ ಓಡಿಪರಗುತ್ತು, ನಿತ್ಯಾನಂದ ಪೂಜಾರಿ ಕೆಂತಲೆ, ಹರೀಶ್ ಶೆಟ್ಟಿ ಕಾಪು, ಚಂದ್ರಹಾಸ ಶೆಟ್ಟಿ, ಭಾಸ್ಕರ ಶೆಟ್ಟಿ, ವಿಜಯ ಶೆಟ್ಟಿ, ಶೇಖರ ಶೆಟ್ಟಿ, ಪದ್ಮರಾಜ್ ಬಲ್ಲಾಳ್ ಮಾವಂತೂರು, ವಿಜಯ ಫೆರ್ನಾಂಡಿಸ್, ಚಂದ್ರಹಾಸ ಸಾಧು ಸನಿಲ್, ರಾಜೇಶ್ ಶೆಟ್ಟಿ ಸೀತಾಳ, ನರಿಂಗಾನ ಕಂಬಳ ಸಮಿತಿ ಅಧ್ಯಕ್ಷ ಪ್ರಶಾಂತ್ ಕಾಜವ, ವೇಣೂರು ಕಂಬಳ ಸಮಿತಿ ಅಧ್ಯಕ್ಷ ನಿತಿನ್ ಕೋಟ್ಯಾನ್, ಸ್ಥಳದಾನಿಗಳಾದ ಓಬಯ್ಯ ಪೂಜಾರಿ, ಕೊರಗಪ್ಪ ಪೂಜಾರಿ, ಸಮಿತಿ ಪದಾಧಿಕಾರಿಗಳಾದ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ಶಶಿಧರ ಶೆಟ್ಟಿ ಕಲ್ಲಾಪು, ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ವಕೀಲ ಸುರೇಶ್ ಶೆಟ್ಟಿ ಸಿದ್ದಕಟ್ಟೆ, ಸುರೇಶ್ ಶೆಟ್ಟಿ ಕುತುಲೋಡಿ,ಸಂದೇಶ್ ಶೆಟ್ಟಿ ಪೊಡುಂಬ, ಕಿರಣ್ ಕುಮಾರ್ ಮಂಜಿಲ, ಚಂದ್ರಶೇಖರ ಕೊಡಂಗೆ, ವಸಂತ ಶೆಟ್ಟಿ ಕೇದಗೆ, ಉಮೇಶ್ ಶೆಟ್ಟಿ ಕೊನೆರೊಟ್ಟುಗುತ್ತು, ಬಾಬು ರಾಜೇಂದ್ರ ಶೆಟ್ಟಿ ಆಲದಪದವು, ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಸುಧಾಕರ ಚೌಟ, ಜನಾರ್ದನ ಬಂಗೇರ ತಿಮ್ಮರಡ್ಡ, ಉಮೇಶ್ ಹಿಂಗಾಣಿ, ಬಿ.ಶಿವಾನಂದ ರೈ, ಹಿರಿಯ ತೀರ್ಪುಗಾರರಾದ ಎಡ್ತುರು ರಾಜೀವ್ ಶೆಟ್ಟಿ, ವಿಜಯ್ ಕುಮಾರ್ ಕಂಗಿನ ಮನೆ ಮತ್ತಿತರರು ಇದ್ದರು.


ಕಂಬಳ ಸಮಿತಿ ಅಧ್ಯಕ್ಷ ಪೊಡುಂಬ ಸಂದೀಪ್ ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ ವಂದಿಸಿದರು. ಕಿಶೋರ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
ವಿಶೇಷತೆ:
ಹೊಸ ಕರೆಯಲ್ಲಿ ಒಂದೇ ವರ್ಷದೊಳಗೆ 3 ನೇ ಕಂಬಳ ಮತ್ತು ಪ್ರಸಕ್ತ ಸಾಲಿನ ಪ್ರಥಮ ಕಂಬಳಕ್ಕೆ ವೀರ -ವಿಕ್ರಮ ಜೋಡುಕರೆ ಸಾಕ್ಷಿಯಾಯಿತು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter