ಅಮ್ಮುoಜೆ ಏಕಾಹ ಭಜನೋತ್ಸವಕ್ಕೆ ಚಾಲನೆ
ಅಮ್ಮುoಜೆ :ಶ್ರೀ ವಿನಾಯಕ ಭಜನಾಮಂಡಳಿ ಶ್ರೀ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನ ಅಮ್ಮುoಜೆ ಶ್ರೀ ವಿನಾಯಕ ದೇವರ ಸನ್ನಿಧಿಯಲ್ಲಿ ಶನಿವಾರ ಬೆಳಗ್ಗೆ ಏಕಾಹ ಭಜನೆ ಪ್ರಾರಂಭಗೊಂಡಿತು.
ದೇವಳದ ಅರ್ಚಕ ಶಶಿಧರ ಭಟ್ ದೀಪಪ್ರಜ್ವಳಿಸಿ ಚಾಲನೆ ನೀಡಿದರು. ದೇವಳದ ಆಡಳಿತ ಮೊಕ್ತೇಸರ ನಾಗೇಶ್ ರಾವ್, ಮಾದುಕೋಡಿ ವಿಜಯ ಗುರೂಜಿ, ಹರೀಶ್ ರಾವ್, ರಾಧಾ ಕ್ರಷ್ಣ ತಂತ್ರಿ ಹಾಗೂ ವಿನಾಯಕ ಭಜನಾ ಮಂಡಳಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಇದ್ದರು
ನ. 23 ಶನಿವಾರ ದಿಂದ ಮರುದಿನ ನ. 24ಭಾನುವಾರದವರೆಗೆ ನಾನಾ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ನೇರವೇರಲಿದೆ.