ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬಂಟ್ವಾಳ ತಾಲೂಕು ಶಾಖೆಯ ನೂತನ ಅಧ್ಯಕ್ಷರಾಗಿ ಶಿವಪ್ರಸಾದ್ ಶೆಟ್ಟಿ ಆಯ್ಕೆ
ಬಂಟ್ವಾಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬಂಟ್ವಾಳ ತಾಲೂಕು ಶಾಖೆಯ 2024-29 ನೇ ಅವಧಿಯ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಬಿ.ಸಿ. ರೋಡ್ ನಲ್ಲಿರುವ ಸಂಘದ ಸಭಾಭವನದಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಶಿವಪ್ರಸಾದ್ ಶೆಟ್ಟಿ ಅವರು ಆಯ್ಕೆಗೊಂಡರು.ಉಳಿದಂತೆ ಪದಾಧಿಕಾರಿಗಳಾಗಿ
ಸಂತೋಷ್ ಕುಮಾರ್ (ಪ್ರಧಾನ ಕಾರ್ಯದರ್ಶಿ),ಬಸಯ್ಯ ಆಲಿಮಟ್ಟಿ(ಖಜಾಂಚಿ) ,ರಾಜ್ಯ ಪರಿಷತ್ ಸದಸ್ಯರಾಗಿ ಜನಾರ್ಧನ್ ಜೆ .ಅವರು ಆಯ್ಕೆಯಾಗಿರುತ್ತಾರೆ.
ಶಮಂತ್ ಕುಮಾರ್ (ಗೌರವಾಧ್ಯಕ್ಷರು),ನಂದನ್ ಶೆಣೈ ಹಾಗೂ ಯಮನಪ್ಪ(ಹಿರಿಯ ಉಪಾಧ್ಯಕ್ಷರು) ಲಕ್ಷ್ಣಣ್ ಹೆಚ್ ಕೆ,ರಮಾನಂದ, ಸೀತಾರಾಮ ಪೂಜಾರಿ(ಉಪಾಧ್ಯಕ್ಷರುಗಳು) ಅವರು ಆಯ್ಕೆಯಾಗಿದ್ದಾರೆ. ತಾಲೂಕಿನ ವಿವಿಧ ಇಲಾಖೆಯಿಂದ ಒಟ್ಟು 28 ಮಂದಿಯನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಯಿತು ಎಂದು ಸಂಘದ ಪ್ರಕಟಣೆ ತಿಳಿಸಿದೆ.
ನಿವೃತ್ತ ಮುಖ್ಯೋಪಾಧ್ಯಾಯರಾದ ರಮೇಶ್ ನಾಯಕ್ ರಾಯಿ ಅವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ನಂತರ ಸಂಘದ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಎಲ್ಲ ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಸಭೆಯ ಅಧ್ಯಕ್ಷ ತೆಯನ್ನು ನಿಕಟಪೂರ್ವ ಅಧ್ಯಕ್ಷ ರಾದ ಉಮಾನಾಥ ರೈ ಮೇರಾವು ವಹಿಸಿದ್ದರು.
ಚುನಾವಣಾಧಿಕಾರಿಗಳಾದ ರಮೇಶ್ ನಾಯಕ್ ರಾಯಿ,ಗೌರವ ಸಲಹೆಗಾರರಾದ ಡಾ.ಆಶೋಕ್ ಕುಮಾರ್ ರೈ,ಅಂಬಾಪ್ರಸಾದ್,ನವೀನ್ ಕುಮಾರ್ ಬೆಂಜನಪದವು, ಜೋಯೆಲ್ ಲೋಬೋ,ಗುರುರಾಜ ,ಇಂದುಶೇಖರ್, ರಾಜೇಂದ್ರ ರೈ,ಪದ್ಮರಾಜ್ ಶಿಂಧೆ,ಜನಾರ್ಧನ್ ಕೊಯಿಲ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಸ್ವಾಗತಿಸಿ, ಖಜಾಂಚಿ ಬಸಯ್ಯ ಆಲಿಮಟ್ಟಿ ವಂದಿಸಿದರು. ಜಯರಾಮ್ ಕಾರ್ಯಕ್ರಮ ನಿರೂಪಿಸಿದರು.



