ನೂತನ ಗ್ರಂಥಾಲಯ ಕೊಠಡಿ, ಅಂಗನವಾಡಿ ಕೇಂದ್ರದ ಆಟಿಕಾ ವನದ ಉದ್ಘಾಟನೆ
ಬಂಟ್ವಾಳ: ಬಾಳ್ತಿಲ ,ಕುದ್ರೆಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಗ್ರಂಥಾಲಯ ಕೊಠಡಿ ಮತ್ತು ಅಂಗನವಾಡಿ ಕೇಂದ್ರದ ಆಟಿಕಾ ವನವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಮಕ್ಕಳಿಗೆ ಶೈಕ್ಷಣಿಕ ಮನೋಭಾವವನ್ನು ಮೂಡಿಸುವ ಪ್ರಾರಂಭಿಕ ಹಂತವೇ ಅಂಗನವಾಡಿ ಯಾಗಿದೆ.ಇಲ್ಲಿ ಆಟ, ಪಾಠದ ಜೊತೆಗೆ ಸಂಸ್ಕಾರದ ಜೀವನಕ್ಕೆ ಮೂಲ ತಳಹದಿ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ,ಬಾಳ್ತಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರಂಜಿನಿ ವಹಿಸಿದ್ದರು. ಮಾಜಿ ಶಾಸಕರಾದ ರುಕ್ಮಯ ಪೂಜಾರಿ,ಮಾಜಿ ಜಿ.ಪಂ.ಸದಸ್ಯ ಚೆನ್ನಪ್ಪ ಕೋಟ್ಯಾನ್,ಎಂ ಆರ್ ಪಿ. ಎಲ್ ನ ವಿಕ್ರಮ್ ನಾಯಕ್, ಗ್ರಾ.ಪಂ.ಸದಸ್ಯರಾದ ವಿಠಲ್ ನಾಯ್ಕ್, ಲೀಲಾವತಿ, ಲತೀಶ್ ,ದೇವಿಕಾ,ಉಷಾ,ಸುಂದರ ಸಾಲಿಯಾನ್,ಮಮತಾ,ಮೋಹನ್ ಪ್ರಭು,ಸುರೇಖಾ,
ಸುಜಾತ ,ಶಿವರಾಜ್,ಮತ್ತಿತರರು ಉಪಸ್ಥಿತರಿದ್ದರು.