ವಕೀಲರಿಗೆ “ವಿಧಿ ವಿಜ್ಞಾನ ಜಾಗೃತಿ ಕಾರ್ಯಾಗಾರ”
ಬಂಟ್ವಾಳ :ವಕೀಲರ ಸಂಘ (ರಿ), ಬಂಟ್ವಾಳ ಮತ್ತು ಕ್ಲೂ-4 ಎವಿಡೆನ್ಸ್ ಪೌಂಡೇಶನ್ ಇದರ ಜಂಟಿ ಆಶ್ರಯದಲ್ಲಿ ಬಂಟ್ವಾಳ ವಕೀಲರ ಸಂಘದ ಅವರಣದಲ್ಲಿ” ವಿಧಿ ವಿಜ್ಞಾನ ಜಾಗೃತಿ ಕಾರ್ಯಾಗಾರ”ವನ್ನು ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪೌಂಡೇಶನ್ ನ ನಿರ್ದೇಶಕರಾದ ಪನೀಂಧರ್ ಬಿ.ಎನ್. ರವರು ವಕೀಲರಿಗೆ ವಿಧಿ ವಿಜ್ಞಾನದ ಜಾಗೃತಿಯ ಅಗತ್ಯತೆ ಬಗ್ಗೆ ಮಾಹಿತಿ ನೀಡಿದರು.

ಕೇಂದ್ರ ಸರಕಾರ ಹೊಸದಾಗಿ ಜಾರಿಗೆ ತಂದ ಭಾರತೀಯ ನ್ಯಾಯ ಸಂಹಿತೆ ಕಾನೂನಿನಲ್ಲಿ 3 ವರ್ಷಕ್ಕಿಂತ ಮೇಲ್ಪಟ್ಟ ಶಿಕ್ಷೆಯ ಅಪರಾಧಗಳಿಗೆ ವಿಧಿ ವಿಜ್ಞಾನದ ವರದಿ ಕಡ್ಡಾಯವಾಗಿರುವ ಹಿನ್ನಲೆಯಲ್ಲಿ ವಕೀಲರಿಗೆ ವಿಧಿ ವಿಜ್ಞಾನದ ಬಗ್ಗೆ ಮಾಹಿತಿ ಅತೀ ಅಗತ್ಯವಾಗಿದೆ. ಮುಂದಿನ ದಿನಗಳಲ್ಲಿ ಸಾಮಾನ್ಯ ಅಪರಾಧ ಕಡಿಮೆಯಾಗಲಿದ್ದು, ಡಿಜಿಟಲ್ ಅಪರಾಧಗಳು ಹೆಚ್ಚಾಗಲಿದೆ ಡಿಜಿಟಲ್ ಅಪರಾಧಗಳ ಬಗ್ಗೆ ಪ್ರತಿ ವಕೀಲರು ಜ್ಞಾನ ಹೊಂದಿರಬೇಕು ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಭಾಗ್ಯಮ್ಮ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಾಗಾರವನ್ನು ಉದ್ಘಾಟಿಸಿದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಕೃಷ್ಣಮೂರ್ತಿ ಏನ್., ರವರು ಗೌರವ ಉಪಸ್ಥಿತರಿದ್ದರು.
ವಕೀಲರ ಸಂಘದ ಅಧ್ಯಕ್ಷರಾದ ರಿಚಾರ್ಡ್ ಕೊಸ್ತಾ ಎಂ ರವರು ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದರು. ನ್ಯಾಯವಾದಿ ರವೀಂದ್ರ ಕುಕ್ಕಾಜೆ ಕಾರ್ಯಕ್ರಮ ನಿರ್ವಹಿಸಿದರು. ನ್ಯಾಯವಾದಿ ವೀರೇಂದ್ರ ಎಂ ಸಿದ್ದಕಟ್ಟೆ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಹಿರಿಯ, ಕಿರಿಯ ವಕೀಲರು ಭಾಗವಹಿಸಿದರು.