Published On: Mon, Nov 18th, 2024

ಉತ್ತಮ ಆರೋಗ್ಯ, ಉದ್ಯೋಗ ದೊರೆತಾಗ ಮಗು ಸ್ವತಂತ್ರವಾಗಿ ಬದುಕಲು ಸಹಕಾರಿ: ಶಾಸಕ ಅಶೋಕ್ ಕುಮಾರ್ ರೈ

ಬಂಟ್ವಾಳ :  ಸರಕಾರಿ ಶಾಲೆಗಳು ಇಂ್ಉ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿವೆ , ಉತ್ತಮ ಆರೋಗ್ಯದ ಜೊತೆಗೆ ಶಿಕ್ಷಣವನ್ನು ನೀಡಿ ಸಮಾಜದ ಅಭಿವೃದ್ಧಿಗೆ ಕೆಲಸ ಮಾಡಬೇಕು.ಎರಡು ಗ್ರಾಮ ಪಂಚಾಯಿತಿ ಗೊಂದರಂತೆ ಕೆಪಿಎಸ್ ಶಾಲೆಗಳನ್ನು ತೆರೆಯುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು  ಪುತ್ತೂರು  ಶಾಸಕ  ಅಶೋಕ್ ಕುಮಾರ್ ರೈ ಹೇಳಿದರು.


ಶನಿವಾರ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಪಡಿಬಾಗಿಲು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ನೂತನವಾಗಿ ನಿರ್ಮಾಣವಾದ ವಿವೇಕ ತರಗತಿ ಕೊಠಡಿ ಹಾಗೂ ಎಂ ಆರ್ ಪಿ ಎಲ್ ಸಂಸ್ಥೆಯ ಸಿ ಎಸ್ ಆರ್ ಅನುದಾನದಿಂದ ನಿರ್ಮಾಣವಾದ ತರಗತಿ ಕೊಠಡಿಗಳನ್ನು  ಉದ್ಘಾಟಿಸಿ ಅವರು ಮಾತನಾಡಿದರು.


,  ಒಂದು ಉತ್ತಮ ಸಮಾಜದ ನಿರ್ವಹಣೆಗೆ ಜನರ ಭಾವನೆಗೆ ಸ್ಪಂದಿಸುವುದು ಮುಖ್ಯವಾಗಿದೆ . ಯಾವ ಮಗುವೂ ವಿದ್ಯಾಭ್ಯಾಸದಿಂದ ವಂಚಿತವಾಗಬಾರದು ಅಲ್ಲದೆ ಉತ್ತಮ ಆರೋಗ್ಯ ಮತ್ತು ಉತ್ತಮ ಉದ್ಯೋಗ ದೊರೆತಾಗ ಆ ಮಗು ಸ್ವತಂತ್ರವಾಗಿ ಬದುಕಲು ಸಹಾಯವಾಗುತ್ತದೆ, ಶಿಕ್ಷಣವು ಕೇವಲ ಪಠ್ಯ ಪುಸ್ತಕ ಸೀಮಿತವಾಗಿರದೇ ಆಚಾರ ವಿಚಾರ ಸಂಸ್ಕೃತಿ ಯನ್ನೂ ಬಿಂಬಿಸಬೇಕಾಗುತ್ತದೆ ಎಂದರು.


ಪ್ರಸಕ್ತ ವರ್ಷದಿಂದ ಪ್ರಧಾನ ಮಂತ್ರಿಗಳ ಕನಸಿನಂತೆ ಫಿಟ್ ಇಂಡಿಯಾ ಸ್ಕಿಲ್ ಇಂಡಿಯಾ ಎಂಬ  ವಿಚಾರಗಳಿಗೆ  ಎಂ ಆರ್ ಪಿ ಎಲ್ ಸಂಸ್ಥೆ ಸ್ಪಂದನೆ ನೀಡುತ್ತಿದೆ.  ಪೌಷ್ಠಿಕ ಆಹಾರ ವಿತರಣೆ ಹಾಗೂ ಸಮಾಜ ಮುಖಿ ಕೆಲಸದ ಮೂಲಕ ತನ್ನದೇ ಆದ ಕಾರ್ಯಗಳನ್ನು ನಿರ್ವಹಿಸುತ್ತಿವೆ ಎಂದು ಅತಿಥಿಯಾಗಿ ಭಾಗವಹಿಸಿದ್ದ ಎಂ ಆರ್ ಪಿ ಯಲ್ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದ ಸೀನಿಯರ್ ಮ್ಯಾನೇಜರ್  ದಯಾನಂದ ಪ್ರಭು ಹೇಳಿದರು.


  ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಕೇಪು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ರಾಘವ ಮಣಿಯಾಣಿ ವಹಿಸಿ ಮಾತನಾಡಿ ಒಂದು ವಿದ್ಯಾಸಂಸ್ಥೆಯು ಅಭಿವೃದ್ಧಿಯನ್ನು ಸಾಧಿಸಬೇಕಾದರೆ ಗ್ರಾಮಸ್ಥರ, ಪೋಷಕರ ಸಹಕಾರ ಅತ್ಯಂತ ಅವಶ್ಯಕವಾಗಿದೆ ಎಂದರು.

ಇದೇ ವೇಳೆ ಶಾಸಕ ಅಶೋಕ್ ಕುಮಾರ್ ರೈ,ಎಂ ಆರ್ ಪಿ ಎಲ್ ಸಂಸ್ಥೆಯ  ಮಾರ್ಕೆಟಿಂಗ್ ವಿಭಾಗದ ಸೀನಿಯರ್ ಮ್ಯಾನೇಜರ್  ದಯಾನಂದ ಪ್ರಭು ಹಾಗೂ  ಕೇಪು ಗ್ರಾಮ ಪಂಚಾಯಿತಿನ ಮಾಜಿ ಅಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಇವರನ್ನು ಅಭಿನಂದಿಸಲಾಯಿತು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ  ಮಂಜುನಾಥನ್ ಎಮ್ ಜಿ, ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಕೇಪು ಗ್ರಾಮ ಪಂಚಾಯತಿನ ಸದಸ್ಯರಾದ  ಜಗಜೀವನ್ ರಾಮ್ ಶೆಟ್ಟಿ, ಪುರುಷೋತ್ತಮ ಗೌಡ, ಅಬ್ದುಲ್ ಕರೀಂ, ಸದಸ್ಯೆಯರಾದ  ಮೋಹಿನಿ,  ವಿಶಾಲಾಕ್ಷಿ, ವಿದ್ಯಾಸಿರಿ ಶಿಕ್ಷಣ ಕೇಂದ್ರ ಪಡಿಬಾಗಿಲು ಇದರ ಅಧ್ಯಕ್ಷರಾದ  ಪ್ರಭಾಕರ್ ಶೆಟ್ಟಿ ದಂಬೆಕಾನ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ  ವಿಶಾಲಾಕ್ಷಿ,ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಸಂದೇಶ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ ಎಸ್ ಮಹಮದ್, ವಿಟ್ಲ ಪಂಚಾಯತ್ ನ ಮಾಜಿ ಉಪಾಧ್ಯಕ್ಷ ರಮನಾಥ ವಿಟ್ಲ, ಶ್ರೀನಿವಾಸ ಶೆಟ್ಟಿ, ಮುರಳಿದ ರೈ, ಸಂಗಮ ಯುವಕ ಮಂಡಳದ ಉಪಾಧ್ಯಕ್ಷ ರಘುನಾಥ್, ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ಆನಂದ ಆಚಾರ್ಯ,ಕೇಪು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಪುಷ್ಪ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಂಟ್ವಾಳ ತಾಲೂಕು ಪ್ರಧಾನ ಕಾರ್ಯದರ್ಶಿ ಯತೀಶ್  ಉಪಸ್ಥಿತರಿದ್ದರು.
ವಿದ್ಯಾಸಿರಿ ಟ್ರಸ್ಟ್ ಪಡಿಬಾಗಿಲು ಇದರ ಗೌರವಾಧ್ಯಕ್ಷರಾದ ಲಿಂಗಪ್ಪಗೌಡ  ಸ್ವಾಗತಿಸಿ, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸುಜಾತ ಕೆ. ರೈ ವಂದಿಸಿದರು. ಸಹ ಶಿಕ್ಷಕಿ ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿದರು.  

2 Attachments • Scanned by Gmail

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter