ಬಂಟ್ವಾಳ : ದಾಳಿಕೋರನ ಹೆಸರಿನಲ್ಲಿ ಸ್ಮಾರಕ ನಿಮರ್ಾಣ ನಮ್ಮ ಹಿಂದೂ ಸಮಾಜಕ್ಕೆ ನಾಚಿಕೆ . ಇದನ್ನು ಮಾಡಲು ನಮ್ಮ ಸಮಾಜ ಬಿಡುವುದಿಲ್ಲ . ದೇಶ ವಿದೇಶಗಳಲ್ಲಿ ಪೂಜ್ಯನೀಯ ಸ್ಥಾನ ಪಡೆದ ಶ್ರೀರಾಮನೇ ನಮಗೆ ಆದರ್ಶ , ಶ್ರೀರಾಮಚಂದ್ರನೆಂದರೆ ರಾಷ್ಟ್ರೀಯತೆ ಎಂದು ಹಿಂದೂ ಜಾಗರಣಾ ವೇದಿಕೆಯ ರಾಜ್ಯ ಸಂಚಾಲಕ ಸತ್ಯಜಿತ್ ಸುರತ್ಕಲ್ ಹೇಳಿದರು . ಅವರು ಹಿಂದೂ ಜಾಗರಣಾ ವೇದಿಕೆ ಬಂಟ್ವಾಳ ಇದರ ಆಶ್ರಯದಲ್ಲಿ ಬಿ.ಸಿ.ರೋಡ್ನ ರಕ್ತೇಶ್ವರೀ ದೇವಸ್ಥಾನದಲ್ಲಿ ನಡೆದ ಅಯೋಧ್ಯೆ ಶ್ರೀ ರಾಮ ಜನ್ಮಸ್ಥಾನದ ಮುಕ್ತಿ ಆಂದೋಲನದ ವಿಜಯೋತ್ಸವದ ಅಂಗವಾಗಿ ಸಾರ್ವಜನಿಕ ಸತ್ಯನಾರಾಯಣ ಪೂಜೆಯ ಧಾಮರ್ಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು .
KAR_6641

KAR_6646
ಸುಸಂಸ್ಕೃತ ಹಿಂದೂ ಸಮಾಜದ ಸಂಘಟನೆ ಇಂದಿನ ಅವಶ್ಯಕತೆ ಎಂದು ಶ್ರೀ ರಾಮ ಪದವಿಪೂರ್ವ ಕಾಲೇಜು ಕಲ್ಲಡ್ಕ ಇಲ್ಲಿನ ಉಪನ್ಯಾಸಕಿ ಕುಮಾರಿ ಅಕ್ಷತಾ ನುಡಿದರು . ವೇದಿಕೆಯಲ್ಲಿ ಹಿಂದೂ ಜಾಗರಣಾ ವೇದಿಕೆ ಬಂ.ತಾಲೂಕು ಅಧ್ಯಕ್ಷ ಜಗದೀಶ್ ನೆತ್ತರಕೆರೆ , ಜಿಲ್ಲಾ ಸಹಸಂಚಾಲಕ ಬಾಲಕೃಷ್ಣ ಕಲಾಯಿ , ತಾಲೂಕು ಸಂಚಾಲಕ ಚಂದ್ರ ಕಲಾಯಿ ಉಪಸ್ಥಿತರಿದ್ದರು . ತಾಲೂಕು ಸಹ ಸಂಚಾಲಕ ಶೈಲೇಶ್ ಬಂಟ್ವಾಳ ಸ್ವಾಗತಿಸಿದರು . ಅಧ್ಯಕ್ಷ ಸುರೇಶ್ ಬಿ. ವಂದಿಸಿ ಜಗದೀಶ್ ಕಡೆಗೋಳಿ ಕಾರ್ಯಕ್ರಮ ನಿರ್ವಹಿಸಿದರು .

By suddi9

Leave a Reply

Your email address will not be published. Required fields are marked *