ಕೊಡಗು: ಶಾಲೆಯ ಅನತಿ ದೂರದಲ್ಲೇ ಹುಲಿ ಹೆಜ್ಜೆ ಪತ್ತೆ, ಆತಂಕದಲ್ಲಿ ಗ್ರಾಮಸ್ಥರು
ಶಾಲೆಯ ಅನತಿ ದೂರದಲ್ಲೇ ಹುಲಿ ಹೆಜ್ಜೆ ಪತ್ತೆಯಾಗಿದ್ದು, ಗ್ರಾಮದ ಸರ್ಕಾರಿ ಪ್ರಾಥಮಿಕಶಲೆಯ ಪಕ್ಕದಲ್ಲೇ ಹುಲಿ ಸಂಚರಿಸಿದೆ. ಹೌದು, ವಿರಾಜಪೇಟೆ ನಗರದಿಂದ ಕೇವಲ ಐದು ಕಿಮಿ ದೂರದಲ್ಲಿರುವ ಚೆಂಬೆಬೆಳ್ಳೂರು ಗ್ರಾಮದಲ್ಲಿ ಹುಲಿ ಓಡಾಡಿದೆ.
ಶಾಲೆಸುತ್ತಮುತ್ತ ಇಂದು ಬೆಳಗ್ಗೆ ಓಡಾಡಿರುವ ಅನುಮಾನ ವ್ಯಕ್ತವಾಗಿದ್ದು , ಈಗಾಗಲೆ ಒಂದು ಹಸು ಒಂದು ಕರುವನ್ನು ಕೊಂದಿದೆ ಎನ್ನಲಾಗಿದೆ. ಗ್ರಾಮದ ನಾಲ್ಕು ಕಡೆಗಳಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿದೆ.
ಈ ಪ್ರದೇಶದಲ್ಲೂ ಒಬ್ಬೊಬ್ಬರಾಗಿ ಗ್ರಾಮಸ್ಥರು, ಶಾಲಾಮಕ್ಕಳು ಓಡಾಡುವ ಕಾರಣ ಗ್ರಾಮಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಹುಲಿ ಕಾಡಿಗೋಡಿಸಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ರಾಜ್ಯ ವನ್ಯ ಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಗ್ರಾಮಕ್ಕೆ ಭೇಟಿ ನೀಡಿದ್ದಾರೆ.