ಮಂಗಳೂರು: ಬಸ್ ಮತ್ತು ಕಾರು ಅಪಘಾತ; ಬಸ್ಸಿನ ಒಳಗಡೆ ನುಗ್ಗಿ ಅವಾಜ್ ಹಾಕಿದ ಕಾರು ಚಾಲಕ ಹಾಗೂ ತಂಡ
ಬಸ್ ಮತ್ತು ಕಾರು ತಾಗಿದ ವಿಚಾರದಲ್ಲಿ ಕಾರಿನಲ್ಲಿದ್ದ ಪ್ರಯಾಣಿಕರು ಹಾಗೂ ಬಸ್ ಚಾಲಕ ನಿರ್ವಾಹಕರ ನಡುವೆ ಮಾತಿನ ಚಕಮಕಿಯೂ ಏರ್ಪಟ್ಟಿದ್ದು, ಈ ಘಟನೆಯೂ ಮಂಗಳೂರು ನಗರ ಹೊರವಲಯದ ಕಾರ್ನಾಡ್ ಎಂಬಲ್ಲಿ ನಡೆದಿದೆ.
ಕಾರು ಚಾಲಕ ಹಾಗೂ ತಂಡದವರು ಬಸ್ಸಿನ ಒಳಗಡೆ ಬಂದು ಅವಾಜ್ ಹಾಕಿದ್ದಾರೆ. ಚಾಲಕ, ನಿರ್ವಾಹಕ ಕೆಳಗೆ ಇಳಿಯುವಂತೆ ಒತ್ತಾಯಿಸಿದ್ದು ಇಳಿಯದಿದ್ದರೆ ಬಸ್ಸಿನ ಗ್ಲಾಸ್ ಒಡೆದು ಹಾಕೋದಾಗಿ ಬೆದರಿಕೆ ಹಾಕಿದ್ದಾರೆ. ಈ ವಾಗ್ವಾದದ ವಿಡಿಯೋ ಮಾಡುತ್ತಿದ್ದ ಬಸ್ ನಲ್ಲಿದ್ದ ಪ್ರಯಾಣಿಕನಿಗೂ ನಿಂಧಿಸಿದ್ದಾರೆ.
ಈ ಘಟನೆ ಸಂಬಂಧಪಟ್ಟ ಎರಡು ಕಡೆಯವರನ್ನು ಪೊಲೀಸರು ಠಾಣೆಗೆ ಕರೆಸಿದ್ದು, ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಪೊಲೀಸರು ದಂಡ ವಿಧಿಸಿದ್ದಾರೆ. ಮಂಗಳೂರು ಉತ್ತರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.