ಮಂಗಳೂರು: ಸ್ಕೂಟರ್ ಸ್ಕಿಡ್ ಆಗಿ ಬಿದ್ದು, ಟ್ಯಾಂಕರ್ ಹರಿದು ಸಹ ಸವಾರೆ ರಹಮತ್ ಮೃತ
ಸ್ಕೂಟರ್ ಸ್ಕಿಡ್ ಆಗಿ ಬಿದ್ದು ಸಹ ಸವಾರೆ ಸಾವನ್ನಪ್ಪಿದ ಘಟನೆಯೂ ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಚೆಂಬುಗುಡ್ಡೆ ಎಂಬಲ್ಲಿ ಘಟನೆ ನಡೆದಿದೆ. ಕುತ್ತಾರುವಿನ ರಹಮತ್(47) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ನ.9ರಂದು ನಡೆದಿದ್ದ ಅಪಘಾತ ಸಹ ಸವಾರೆ ಮೇಲೆಯೇ ಟ್ಯಾಂಕರ್ ಲಾರಿ ಹರಿದಿದ್ದು, ಈ ಅಪಘಾತದ ಭೀಕರ ದೃಶ್ಯ ಟ್ಯಾಂಕರ್ ಲಾರಿಯಲ್ಲಿ ಅಳವಡಿಸಿದ್ದ ಕ್ಯಾಮರಾದಲ್ಲಿ ಸೆರೆಯಾಗಿದೆ.
ಯೆನೋಪೋಯಾ ಹಾಸ್ಪಿಟಲ್ ಕಡೆಯಿಂದ ಬಜಪೆ ವಿಮಾನಕ್ಕೆ ತೆರಳುತ್ತಿದ್ದ ರಹಮತ್ ಅವರು, ರಸ್ತೆ ಗುಂಡಿಯಿಂದ ಸ್ಕೂಟರ್ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದೆ. ಈ ಸಂದರ್ಭ ರಸ್ತೆಗೆ ಬಿದ್ದ ರಹಮತ್ ಮೇಲೆಯೇ ಹಿಂದುಗಡೆ ಬರುತ್ತಿದ್ದ ಟ್ಯಾಂಕರ್ ಲಾರಿಯೊಂದು ಹರಿದು ಹೋಗಿದೆ. ಗಂಭೀರ ಗಾಯಗೊಂಡಿದ್ದ ರಹಮತ್ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಪ್ರತಿನಿಧಿಸುವ ಕ್ಷೇತ್ರದಲ್ಲಿ ಈ ಘಟನೆಯೂ ನಡೆದಿದೆ. ರಸ್ತೆ ದುರಸ್ತಿ ಮಾಡದೇ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಸ್ಪೀಕರ್ ಅದೇಶಿಸಿದ್ದಾರೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಯು.ಟಿ ಖಾದರ್ ಸೂಚನೆ ನೀಡಿದ್ದಾರೆ.