ಪುತ್ತೂರು: ಬೃಹತ್ ಗಾತ್ರದ ಹೆಬ್ಬಾವು ಹಿಡಿದ ಧೈರ್ಯವಂತ ಮಹಿಳೆ
ಕಳೆದ ಒಂದೆರಡು ದಿನಗಳಿಂದ ಮಹಿಳೆಯೊಬ್ಬರು ಹೆಬ್ಬಾವು ಹಿಡಿದು ಗೋಣಿ ಚೀಲ ತುಂಬಿಸುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಯಾವುದೇ ಭಯವಿಲ್ಲದೇ ಮಹಿಳೆಯೊಬ್ಬರು ಹೆಬ್ಬಾವು ಹಿಡಿದ ಘಟನೆ ನಡೆದಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು-ಸುಳ್ಯದ ಗಡಿಪ್ರದೇಶದಲ್ಲಿ.
ಈ ಭಾಗದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಇದನ್ನು ಕಂಡು ಗಂಡಸರು ಹೆದರಿಕೊಂಡಿದ್ದಾರೆ. ಆದರೆ ಶೋಭ ಎನ್ನುವ ಮಹಿಳೆಯೊಬ್ಬರು ಬೃಹತ್ ಗಾತ್ರದ ಹೆಬ್ಬಾವು ಹಿಡಿದು ಗೋಣಿ ಚೀಲದಲ್ಲಿ ಹಾಕಿಕೊಂಡು ಹೋಗಿ ಕಾಡಿಗೆ ಬಿಟ್ಟಿದ್ದಾರೆ. ಶೋಭಾ ಎನ್ನುವ ಮಹಿಳೆಯೂ ನಾಜೂಕಾಗಿ ಹಿಡಿದು ಗೋಣಿ ಚೀಲಕ್ಕೆ ತುಂಬಿಸುವ ವೀಡಿಯೋ ವೈರಲ್ ಆಗಿದ್ದು, ಇವರ ಧೈರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.