ಬಂಟ್ವಾಳ: ರೂಟ್ ಪರ್ಮಿಟ್ ಹೊಂದಿರುವ ಬಸ್ ಮತ್ತು ಶಾಲಾ ಬಸ್ಸುಗಳು ಅನಧಿಕೃತವಾಗಿ ಬಾಡಿಗೆ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಬಂಟ್ವಾಳ ಟೂರಿಸ್ಟ್ ವ್ಯಾನ್ ಚಾಲಕ- ಮಾಲಕರ ಸಂಘ ಅಧ್ಯಕ್ಷ ಸದಾನಂದ ಹಳೆಗೇಟು ಅವರ ನೇತೃತ್ವದ ನಿಯೋಗ ಬಂಟ್ವಾಳ ಆರ್‌ಟಿಒ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ಸುಮಾರು 80ಕ್ಕು ಹೆಚ್ಚು ಮಿನಿ ಬಸ್, ಮ್ಯಾಕ್ಸಿಕ್ಯಾಬ್, ಟೆಂಪೋ ಟ್ರಾವೆಲ್ಸ್ ಗಳಿದ್ದು, ಮಿನಿ ಬಸ್ 60 ಸಾ.ರೂ., ಟೆಂಪೋ ಟ್ರಾವೆಲರ್ 23 ಸಾ.ರೂ. ವರೆಗೆ ವಾರ್ಷಿಕ ತೆರಿಗೆಯನ್ನು ಟೂರಿಸ್ಟ್ ಪರ್ಮಿಟ್ ಆಧಾರದಲ್ಲಿ ಸರಕಾರಕ್ಕೆ ಪಾವತಿ ಮಾಡುತ್ತಿದ್ದು, ನಮ್ಮ ಈ ಟೂರಿಸ್ಟ್ ವಾಹನಗಳಿಗೆ ವಾರದಲ್ಲಿ ಒಂದು ಅಥವಾ ಎರಡು ಬಾಡಿಗೆ ಆಗುತ್ತಿರುವ ಹಿನ್ನಲೆಯಲ್ಲಿ ತುಂಬಾ ಕಷ್ಟದ ಜೀವನವನ್ನು ಸಾಗಿಸುತ್ತಿದ್ದೆವೆ.

ಇತ್ತೀಚಿನ ದಿನಗಳಲ್ಲಿ ಕೆಲವು ರೂಟ್ ಪರ್ಮಿಟ್ ಹೊಂದಿರುವ ಬಸ್ಸುಗಳು ಬಿ.ಸಿ. ರೋಡ್ -ತೊಕ್ಕೊಟ್ಟು- ಮಂಗಳೂರು, ಬಿ.ಸಿ. ರೋಡು -ಕೈಕಂಬ-ಕಟೀಲ್, ಬಿ.ಸಿ. ರೋಡು- ಪಂಜಿಕಲ್- ವಾಮದಪದವು, ಬಿ.ಸಿ. ರೋಡು- ಮೂಡಬಿದ್ರೆ, ಕುಕ್ಕಾಜೆ, ಮಂಚಿ, ಸಾಲೆತ್ತೂರ್, ಬಾಕ್ರಬೈಲ್ ಹಾಗೂ ಮಂಗಳೂರಿನ ಸಿಟಿ ಬಸ್ಸುಗಳು, ಮದುವೆ ಸಹಿತ ವಿವಿಧ ಕಾರ್ಯಕ್ರಮದ ಬಾಡಿಗೆಗಾಗಿ ಬಂಟ್ವಾಳದ ಪರಿಸರದಲ್ಲಿ ಮಾಡುತ್ತಿರುವುದು ಕಂಡು ಬರುತ್ತಿದ್ದು, ಇದರಿಂದಾಗಿ ನಮ್ಮ ಟೂರಿಸ್ಟ್ ವಾಹನಗಳಿಗೆ ಬಾಡಿಗೆ ಇಲ್ಲದಂತಾಗಿದೆ ಎಂದು ಹೇಳಿದ್ದಾರೆ.

ಈ ರೂಟ್ ಬಸ್ಸುಗಳಿಗೆ ಸರಕಾರದಿಂದ ರಿಯಾಯಿತಿ ತೆರಿಗೆ ಇದ್ದು, ಕಡಿಮೆ ಬಾಡಿಗೆಗೆ ಬರುತ್ತಿದೆ. ಟೂರಿಸ್ಟ್ ತೆರಿಗೆ ಪಾವತಿಸುತ್ತಿರುವ ನಮಗೆ ಬಾಡಿಗೆ ಇಲ್ಲದಂತಾಗಿದೆ. ಹಾಗಾಗಿ ಈ ಬಸ್ಸುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಸಂಘದ ಪದಾಧಿಕಾರಿಗಳಾದ ಸುನಿಕ್, ನಮೇಶ್ ಶೆಟ್ಟಿ, ಚಂದ್ರಹಾಸ, ಸುಧಾಕರ ತುಂಬೆ, ಅಬ್ದುಲ್ಲಾ ಅಜಿಲಮೊಗರು, ಮ್ಯಾಕ್ಸಿಮ್‌ ಸಜೀಪ ಈ ವೇಳೆ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *