ಸರಪಾಡಿ: ನವರಾತ್ರಿಯ ಸಂದರ್ಭದಲ್ಲಿ ವೇಷ ಹಾಕಿದ ಸರಪಾಡಿ ಗ್ರಾಮದ ನೀರೊಲ್ಬೆ ನಿವಾಸಿ ದೇವದಾಸ್ ನಾಯ್ಕ್ ಸುಮಾರು ೫೦ ಸಾವಿರ ರೂ.ಗಳಷ್ಟ ಹಣವನ್ನು ಸಂಗ್ರಹಿಸಿ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ಪ್ರಾರ್ಥಿಸಿ ಎರಡು ಅಶಕ್ತ ಕುಟುಂಬಗಳಿಗೆ ಹಸ್ತಾಂತರಿಸಿದ್ದಾರೆ.

ನೀರೊಲ್ಬೆ ನಿವಾಸಿ ದೇವದಾಸ್ ನಾಯ್ಕ್ ಅವರ ಈ ಕಾರ್ಯಕ್ಕೆ ಎಲ್ಲ ಕಡೆ ಮೆಚ್ಚುಗೆ ವ್ಯಕ್ತವಾಗಿದೆ. ಈ ತನಕ ಸುಮಾರು 1.50 ಲಕ್ಷ ರೂ.ಗಳಷ್ಟು ಮೊತ್ತವನ್ನು ಹಸ್ತಾಂತರಿಸಿದ್ದು, ಈ ಬಾರಿ ಸಂಗ್ರಹಗೊಂಡ ೫೯,೫೦೦ ರೂ. ಗಳಲ್ಲಿ ತಲಾ ೨೫ ಸಾವಿರ ರೂ.ಗಳನ್ನು ಅನಾರೋಗ್ಯದಿಂದ ಬಳಲುತ್ತಿರುವ ಇಬ್ಬರಿಗೆ ಹಾಗೂ ಉಳಿದ ಮೊತ್ತವನ್ನು ದೇವಸ್ಥಾನಕ್ಕೆ ನೀಡಿದ್ದಾರೆ.

ಈ ಸಂದರ್ಭ ದೇವಸ್ಥಾನದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ, ಅರ್ಚಕ ಜಯರಾಮ ಕಾರಂತ, ಸರಪಾಡಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಪೂವಪ್ಪ ಪೂಜಾರಿ ಕಡಮಾಜೆ, ದೇವದಾಸ್ ತಾಯಿ ಲಕ್ಷ್ಮೀ, ಗಿರೀಶ್ ನಾಯ್ಕ್ ನೀರಪಲ್ಕೆ, ಯೋಗೀಶ್ ಗೌಡ ನೀರೊಲ್ಬೆ, ಶೇಖರ್ ಮೇಸ್ತ್ರಿ ಬಲಯೂರು, ದಿನೇಶ್ ಪೂಜಾರಿ ಕೂರ್ಯಾಳ, ಪ್ರದೀಪ್ ಗೌಡ ಕುದ್ಕುಂಜ ಮೊದಲಾದವರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *