ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯಲ್ಲಿ ಸಾಹಿತ್ಯ ಸ್ವರಚನೆ ಪ್ರೇರಣಾ ಕಮ್ಮಟ

ಬಂಟ್ವಾಳ : ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಇದರ ವತಿಯಿಂದ ಬಾಳ್ತಿಲ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಆಯ್ದ ಸಾಹಿತ್ಯಾಸಕ್ತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಒಂದು ದಿನದ ಸಾಹಿತ್ಯ ಸ್ವರಚನೆ ಪ್ರೇರಣಾ ಕಮ್ಮಟ ನಡೆಯಿತು. ಬೊಂಡಾಲ ಸರಕಾರಿ ಪ್ರೌಢ ಶಾಲಾ ವಿದ್ಯಾರ್ಥಿ ನಾಯಕ ಕೌಶಿಕ್ ಶೆಟ್ಟಿ ಕವನ ವಾಚಿಸಿ ಕಮ್ಮಟವನ್ನು ಉದ್ಘಾಟಿಸಿದರು.
ಶಾಲಾ ಮುಖ್ಯ ಶಿಕ್ಷಕ ಕಮಲಾಕ್ಷ ಅವರು ಈ ಕಮ್ಮಟದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಸಾಹಿತ್ಯವು ಬದುಕು ಕಟ್ಟಲು ಸಹಾಯಕ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಸ್ಕರ ಅಡ್ವಳ, ರಮೇಶ ಎಂ ಬಾಯಾರು, ಪುಷ್ಪಾ ಎಚ್ ವಿಟ್ಲ ಭಾಗವಹಿಸಿದರು. ಕಮ್ಮಟದಲ್ಲಿ ಬಾಳ್ತಿಲ ಕ್ಲಸ್ಟರ್ ವ್ಯಾಪ್ತಿಯ ವಿವಿಧ ಶಾಲೆಗಳ ಮೂವತ್ತೆರಡು ವಿದ್ಯಾರ್ಥಿಗಳು ಭಾಗವಹಿಸಿದರು.
ಸಮಾರೋಪ ಸಮಾರಂಭದಲ್ಲಿ ಮಕ್ಕಳ ಸ್ವರಚನೆಗಳ ಹಸ್ತ ಪತ್ರಿಕೆಯನ್ನು ಶಂಭೂರು ಸರಕಾರಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಕಮಲಾಕ್ಷ ಅನಾವರಣ ಗೊಳಿಸಿದರು.ಈ ಸಂದರ್ಭದಲ್ಲಿ ರಮೇಶ ಎಂ ಬಾಯಾರು, ಭಾಸ್ಕರ ಅಡ್ವಳ ಮತ್ತು ಪುಷ್ಪಾ ಎಚ್ ಇವರನ್ನು ಶಂಭೂರು ಪ್ರೌಢ ಶಾಲಾ ವತಿಯಿಂದ ಗೌರವಿಸಲಾಯಿತು.
ಬಾಳ್ತಿಲ ಕ್ಲಸ್ಟರ್ ಸಿ.ಆರ್.ಪಿ ಸತೀಶ್ ರಾವ್, ಶಂಭೂರು ಸ ಹಿ ಪ್ರಾ ಶಾಲಾ ಮುಖ್ಯ ಶಿಕ್ಷಕ ಜಯರಾಮ ಪಡ್ರೆ
ಸಹ ಶಿಕ್ಷಕ ದೇವದಾಸ್ ಕೆ, ನರಿಕೊಂಬು ಶಾಲಾ ಮುಖ್ಯೋಪಾಧ್ಯಾಯಿನಿ ಸುಜಾತ ಕುಮಾರಿ ಉಪಸ್ಥಿತರಿದ್ದರು.