ಮಂಗಳೂರು: ಗುಳಿಗ ಕೊರಗಜ್ಜನ ಆದಿಸ್ಥಳಕ್ಕೆ ಭೇಟಿ ನೀಡಿದ ನಟ ದುನಿಯಾ ವಿಜಯ್
ಭೀಮ ಚಿತ್ರದ ಅದ್ದೂರಿ ಯಶಸ್ಸಿನ ನಂತರ ಸ್ಯಾಂಡಲ್ ವುಡ್ ಖ್ಯಾತ ನಟ ದುನಿಯಾ ವಿಜಯ್ ಅವರು ಶೂಟಿಂಗ್ ಗಾಗಿ ಮಂಗಳೂರಿಗೆ ಆಗಮಿಸಿದ್ದು ಈ ವೇಳೆಯಲ್ಲಿ ನಗರದ ಹೊರವಲಯದ ಕಲ್ಲಾಪು ಬುರ್ದುಗೋಳಿಯ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ತನ್ನ 29ನೇ ಚಿತ್ರದ ಚಿತ್ರೀಕರಣಕ್ಕಾಗಿ ದುನಿಯಾ ವಿಜಯ್ ಮಂಗಳೂರಿಗೆ ಆಗಮಿಸಿದ್ದಾರೆ. ಚಿತ್ರೀಕರಣದ ಮಧ್ಯೆ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ದುನಿಯಾ ವಿಜಯ್ ಅವರು ಅಗೇಲು ಸೇವೆಗೆ ತಮ್ಮ ಹೆಸರನ್ನು ಬರೆಸಿದ್ದಾರೆ. ಈ ವೇಳೆಯಲ್ಲಿ ಬುರ್ದುಗೋಳಿ ಕ್ಷೇತ್ರದ ಪರವಾಗಿ ದುನಿಯಾ ವಿಜಯ್ ಗೆ ಸನ್ಮಾನಿಸಲಾಯಿತು.