ಸುಳ್ಯ: ತೂಗು ಸೇತುವೆಯ ಹಗ್ಗ ತುಂಡಾಗಿ ಬಿದ್ದು ಮೂವರಿಗೆ ಗಾಯ, ಅಪಾಯದಿಂದ ಪಾರು

ಅರಂತೋಡು ಸಮೀಪದ ಅರಮನೆಯ ಶಿಥಿಲಗೊಂಡ ತೂಗು ಸೇತುವೆಯ ಹಗ್ಗವೊಂದು ತುಂಡಾಗಿ ಬಿದ್ದ ಪರಿಣಾಮವಾಗಿ ಮೂವರು ಗಾಯಗೊಂಡ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಕುಸುಮಾಧರ ಉಳುವಾರು, ಚಂದ್ರಶೇಖರ ಕೊಂಪುಳಿ ಮತ್ತು ತೇಜಕುಮಾರ್ ಗಾಯಾಳುಗಳು ಎಂದು ಗುರುತಿಸಲಾಗಿದೆ. ಈ ಮೂವರು ರಾತ್ರಿ ಮರ್ಕಂಜದಲ್ಲಿ ಕೆಲಸ ಮುಗಿಸಿ ಅರಮನೆಗಯದ ತೂಗು ಸೇತುವೆಯ ಮೇಲೆ ಮೂವರು ಹೋಗುತ್ತಿದ್ದರು. ಈ ವೇಳೆಯಲ್ಲಿ ಹಗ್ಗವು ತುಂಡಾಗಿದ್ದು, ಇದರ ಪರಿಣಾಮ ಕುಸುಮಾಧರ ಉಳುವಾರು ಅವರ ಕೈಗೆ ಗಂಭೀರ ಏಟಾಗಿದೆ.
ತೇಜಕುಮಾರ್ ಅವರು ಹಗ್ಗದಲ್ಲಿ ನೇತಾಡಿಕೊಂಡಿದ್ದರಿಂದ ಅಲ್ಪ ಸ್ವಲ್ಪ ಗಾಯಗಳಾಗಿವೆ. ಚಂದ್ರಶೇಖರ ಅವರಿಗೆ ಸಣ್ಣ ಪುಟ್ಟ ಗಾಯಾಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಮೂವರನ್ನು ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.