ಕುದ್ರೋಳಿ: ದಕ್ಷಿಣ ಕನ್ನಡದಲ್ಲಿ ದಸರಾ ವೈಭವ ಆರಂಭ, ಇಂದಿನಿಂದ ಸಂಭ್ರಮ ಪ್ರಾರಂಭವಾಗಲಿದೆ. ವೈಭವದ ಮಂಗಳೂರು ದಸರಾಕ್ಕೆ ಚಾಲನೆ ನೀಡಲಾಗಿದೆ. ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಇಂದಿನಿಂದ ದಸರಾ ಉತ್ಸವ ನಡೆಯಲಿದೆ. ಗೋಕರ್ಣನಾಥ ಕ್ಷೇತ್ರದ ಸಭಾಂಗಣದಲ್ಲಿ ಶಾರದೆ ಮಾತೆ ಸಹಿತ ನವದುರ್ಗೆಯರ ಪ್ರತಿಷ್ಠಾಪನೆ ಮಾಡಲಾಗಿದೆ.

ಇನ್ನು ಕುದ್ರೋಳಿ ಒಂದು ದೇವ ಲೋಕದಂತೆ ಸಿಂಗಾರಗೊಂಡಿದೆ, ಬಂಗಾರದ ಕಲಶದಂತೆ ಇಡೀ ಕ್ಷೇತ್ರ ಕಾಣುತ್ತಿದೆ. ದೀಪಾಲಂಕಾರಗಳು ಭಕ್ತರನ್ನು ಸೆಳೆಯುತ್ತಿದೆ. ಮುದ್ದು ಮುಖದ ಶಾರದೆ, ಇನ್ನೊಂದು ಕಡೆ ತಾಯಿಯ ಹಲವು ರೂಪದ ಮೂರ್ತಿಗಳನ್ನು ಕೂಡ ಪ್ರತಿಷ್ಠಾಪನೆ ಮಾಡಲಾಗಿದೆ.

ಈಗಾಗಲೇ ಶಾರದೆ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ಮಂಗಳೂರು ದಸರಾ ಉತ್ಸವಕ್ಕೆ ಚಾಲನೆ ನೀಡಿದ್ದಾರೆ. ಶಾರದೆ ಸಹಿತ ನವದುರ್ಗೆಯರನ್ನು ವೈಭವದ ಮಂಟಪದಲ್ಲಿ ಇರಿಸಲಾಗಿದೆ. ಕುದ್ರೋಳಿ ಕ್ಷೇತ್ರದ ದಸರಾ ಅಕ್ಟೋಬರ್ 13 ರವರೆಗೆ ನಡೆಯಲಿದೆ. ಕೊನೆಯ ದಿನ ಅಂದರೆ ಅ.13ಕ್ಕೆ ಮಂಗಳೂರು ಬೀದಿಗಳಲ್ಲಿ ಭವ್ಯ ಶೋಭಾಯಾತ್ರೆಯ ನಂತರ ವಿಸರ್ಜನೆ ಮಾಡಲಾಗುವುದು. ಇದೀಗ ಶಾರದೆಯನ್ನು ದೇಗುಲಕ್ಕೆ ಪ್ರದಕ್ಷಿಣೆ ಹಾಕಿ ಶಾರದೆಯ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ. ಇನ್ನು ಹುಲಿವೇಷಧಾರಿಗಳು ಶಾರದೆ ಮುಂದೆ ಕುಣಿದು ಗೌರವ ಸಲ್ಲಿಸಿದರೆ. ಇನ್ನು ಮುಂದಿನ 9 ದಿನಗಳ ವರೆಗೆ ತಾಯಿಗೆ ವಿಶೇಷ ಪೂಜೆ ನಡೆಯಲಿದೆ. ಹಾಗೂ ಭಕ್ತ ಸಾಗರ ಕ್ಷೇತ್ರಕ್ಕೆ ಹರಿದು ಬರಲಿದೆ.

By Suddi9

Leave a Reply

Your email address will not be published. Required fields are marked *