ವೀರಕಂಭ ಮಜಿ ಶಾಲೆಯಲ್ಲಿ ಗಾಂಧೀಜಿ ಹಾಗೂ ಶಾಸ್ತ್ರಿ ಅವರ ಜನ್ಮದಿನಾಚರಣೆ ಕಾರ್ಯಕ್ರಮ
ಬಂಟ್ವಾಳ: ತಾಲೂಕಿನ ವೀರಕಂಬ ಗ್ರಾಮದ ಮಜಿ ಸರಕಾರಿ ಪ್ರಾಥಮಿಕ ಶಾಲೆ ಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಭಾವ ಭಾವಚಿತ್ರಕ್ಕೆ ಶಾಲಾ ಮುಖ್ಯ ಶಿಕ್ಷಕಿ, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಪುಷ್ಪ ಸಮರ್ಪಿಸಿದರು.
ಈ ಸಂದರ್ಭ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ಬೆನೆಡಿಕ್ಟ ಆಗ್ನೇಸ್ ಮಂಡೋನ್ಸಾ ಅವರು, ಗಾಂಧೀ ಮತ್ತು ಶಾಸ್ತ್ರೀಯವರ ಒಳ್ಳೆಯ ವಿಚಾರಗಳನ್ನು ನಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು ಇವರ ಜೀವನವು ನಮಗೊಂದು ದಾರಿದೀಪವಾಗಿದೆ. ಮಹನೀಯರ ಬದುಕು ನಮಗೆ ಒಳ್ಳೆಯ ಸಂದೇಶಗಳನ್ನು ನೀಡುತ್ತವೆ ಎಂದು ತಿಳಿಸಿದರು.
ಇದೇ ವೇಳೆವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು ಮತ್ತು ಭಾಷಣವನ್ನು ಮಾಡಿದರು,
ದೈಹಿಕ ಶಿಕ್ಷಕ ಇಂದುಶೇಖರ್ ರವರ ನೇತೃತ್ವದಲ್ಲಿ ಕವಾಯತು,ಪಥಸಂಚಲನ ನಡೆಯಿತು.ಮಕ್ಕಳಿಗೆ ಸಿಹಿ ಊಟವನ್ನು ನೀಡಿ ಸಂಭ್ರಮಿಸಲಾಯಿತು. ಶಿಕ್ಷಕಿಯರಾದ ಭವ್ಯಶ್ರೀ ಸ್ವಾಗತಿಸಿ,
ಪಲ್ಲವಿ ವಂದಿಸಿದರು, ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.