ದ.ಕ.ಜಿಲ್ಲಾ ಶಾಮಿಯಾನ ಮಾಲಕರ ಸಂಘದ ವಾರ್ಷಿಕ ಜಿಲ್ಲಾ ಮಹಾಸಭೆ
ಬಂಟ್ವಾಳ: ದ.ಕ.ಜಿಲ್ಲಾ ಶಾಮಿಯಾನ ಮಾಲಕರ ಸಂಘ (ರಿ.) ಇದರ 7 ನೇ ವಾರ್ಷಿಕ ಜಿಲ್ಲಾ ಮಹಾಸಭೆ ಜಿಲ್ಲಾಧ್ಯಕ್ಷ ಬಾಬು ಕೆ.ವಿಟ್ಲ ಅವರ ಅಧ್ಯಕ್ಷತೆಯಲ್ಲಿ ಬಿ.ಸಿ.ರೋಡಿನ ಸ್ವರ್ಶಾ ಕಲಾ ಮಂದಿರದಲ್ಲಿ ಸೋಮವಾರ
ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಿಲ್ಲಿ ಆರಂಭವಾದ ಶಾಮಿಯಾನ ಸಂಘಟನೆ ಜಿಲ್ಲಾ ಮಟ್ಟದಲ್ಲಿ ಶಿಸ್ತುಬದ್ದವಾಗಿ ಬೆಳೆಯುತ್ತಿರುವ ಸಂಘಟನೆಯಾಗಿ ಸಾಗುತ್ತಿರುವುದು ಅತ್ಯಂತ ಸಂತಸದ ವಿಚಾರ ಎಂದು ಹೇಳಿದರು.ಸಂಘದ ಕನಸಾಗಿರುವ ಸ್ವಂತ ಕಟ್ಟಡದ ನಿರ್ಮಾಣಕ್ಕಾಗಿ ಈಗಾಗಲೇ ನಿವೇಶನವನ್ನು ಖರೀದಿಸಲಾಗಿದ್ದು,ಮುಂದಿನ ದಿನಗಳಲ್ಲಿ ಸುಸಜ್ಜಿತ ಕಟ್ಟಡದ ಯೋಜನೆ ರೂಪಿಸಲಾಗಿದ್ದು, ಎಲ್ಲಾ ಸದಸ್ಯರು ಸಹಕಾರ ನೀಡುವಂತೆ ಮನವಿ ಮಾಡಿದ ಅವರು ಸಂಘದ ಸರ್ವೋತ್ತಮ ಬೆಳವಣಿಗೆಗೆ ಸದಸ್ಯರ ಸಹಕಾರವು ಅತೀ ಅಗತ್ಯವಿದೆ ಎಂದರು.
ಜಿಲ್ಲಾ ಕಾರ್ಯದರ್ಶಿ ನಿಶಿತ್ ಪೂಜಾರಿ, ಬಂಟ್ವಾಳ ಘಟಕದ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಮೂಡಬಿದಿರೆ ಘಟಕದ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ, ಬೆಳ್ತಂಗಡಿ ಘಟಕದ ಅಧ್ಯಕ್ಷ ಹರೀಶ್ ಕುಮಾರ್, ವಿಟ್ಲ ಘಟಕದ ಅಧ್ಯಕ್ಷ ಚಂದ್ರಹಾಸ ಸುವರ್ಣ, ಜಿಲ್ಲಾ ಉಪಾಧ್ಯಕ್ಷರುಗಳಾದ ಅಬ್ದುಲ್ ಲತೀಫ್, ಕ್ಲೇವರ್ ಡಿ.ಸೋಜ ಅವರು ಉಪಸ್ಥಿತರಿದ್ದರು.
ಸಂಘದ ಅಭಿವೃದ್ದಿಗಾಗಿ ಶ್ರಮಿಸಿದ ಬಿ.ಸಿ.ರೋಡು ಘಟಕದ ಐವನ್ ಡಿಸೋಜ, ಮಂಗಳೂರು ಘಟಕದ ಸ್ಟ್ಯಾನಿ ಪಿಂಟೋ,ಬೆಳ್ತಂಗಡಿ ಘಟಕದ ಧರ್ಣಪ್ಪ ಗೌಡ , ಮೂಡಬಿದರೆ ಘಟಕದ ಗಂಗಾಧರ ಶೆಟ್ಟಿ, ವಿಟ್ಲ ಘಟಕದ ಸಂಜೀವ ಪೂಜಾರಿ ವಿಟ್ಲ ಅವರನ್ನು ಸನ್ಮಾನಿಸಲಾಯಿತು.
ನಿಕಟಪೂರ್ವ ಅಧ್ಯಕ್ಷರುಗಳಾದ ಮ್ಯಾಕ್ಸಿಂ ಸ್ವಿಕೇರಾ ಬಂಟ್ವಾಳ , ಯುವರಾಜ್ ಸುವರ್ಣ ಮಂಗಳೂರು, ಪ್ರಭಾಕರ್ ಶೆಟ್ಟಿ ಬೆಳ್ತಂಗಡಿ, ಗಣಪತಿ ಪೈ ಮೂಡಬಿದಿರೆ ಹಾಗೂ ಶಾಮಿಯಾನದ ನಿವೇಶನಕ್ಕೆ ಸಹಕಾರ ನೀಡಿದವರನ್ನು ಗುರುತಿಸಿ ಗೌರವಿಸಲಾಯಿತು.
ಜಿಲ್ಲಾ ಕಾರ್ಯದರ್ಶಿ ನಿಶಿತ್ ಪೂಜಾರಿ ವರದಿ ವಾಚಿಸಿದರು. ಜಿಲ್ಲಾ ಕೋಶಾಧಿಕಾರಿ
ಜಿಲ್ಲಾ ಕೋಶಾಧಿಕಾರಿ ಬಾಲಕೃಷ್ಣ ಕದ್ರಿ
ಲೆಕ್ಕಪತ್ರ ಮಂಡಿಸಿದರು.
ಸುಭಾಶ್ಚಂದ್ರ ಜೈನ್ ಸ್ವಾಗತಿಸಿ, ಕ್ಲೇವರ್ ಡಿ.ಸೋಜ ವಂದಿಸಿದರು.ಮನೋಹರ್ ಕುಮಾರ್ ಬೆಳ್ತಂಗಡಿ ಕಾರ್ಯಕ್ರಮ ನಿರೂಪಿಸಿದ