Published On: Fri, Sep 27th, 2024

ಪೊಳಲಿಯಲ್ಲಿ ಶ್ರೀ ದೇವೀ ಸನ್ನಿಧಿ ಯಲ್ಲಿ ಅ.3ರಿಂದ ಅ.11ರ ವರೇಗೆ ನವರಾತ್ರಿ ಉತ್ಸವ

ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಅಕ್ಟೋಬರ್ 3 ಗುರವಾರದಿಂದ ಅಕ್ಟೋಬರ್ 11 ಶುಕ್ರವಾರದವರೇಗೆ ಶ್ರೀ ದೇವೀ ಸನ್ನಿಧಿಯಲ್ಲಿ ನವರಾತ್ರಿ ಮಹೋತ್ಸವವು ಜರಗಲಿದೆ. ನವರಾತ್ರಿ ಮಹೋತ್ಸವದ ವಿಶೇಷ ಪೂಜೆಯು.ಪ್ರತೀ ನಿತ್ಯ ರಾತ್ರಿ 8 ಗಂಟೆಗೆ ನಡೆಯಲಿದೆ. ನವರಾತ್ರಿ ಸಂದರ್ಭದಲ್ಲಿ ಮಧ್ಯಾಹ್ನ ಭಕ್ತಾಧಿಗಳಿಂದ ಹರಕೆಯ ಚಂಡಿಕಾಹೋಮವೂ ನಡೆಯಲಿದೆ. ನವರಾತ್ರಿಯ ಕಡೆಯದಿನ ಅ.11ರಂದು ಶುಕ್ರವಾರ ಮಹಾನವಮಿ ಪ್ರಯುಕ್ತ ಮಧ್ಯಾಹ್ನ ದೇವಳದ ವತಿಯಿಂದ “ಚಂಡಿಕಾಹೋಮ”ವೂ ನೆರವೇರಲಿದೆ.


ಸಾಂಸ್ಕೃತಿಕ ಕಾರ್ಯಕ್ರಮಗಳು:
ಅ.3 ರಂದು ಸಂಜೆ 5ರಿಂದ ರಾತ್ರಿ ಗಂಟೆ 8.ರತನಕ ಡಾ :ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ ಆವರ ನಿರೂಪಣೆಯಲ್ಲಿ ಜಿಲ್ಲೆಯ ಸುಪ್ರಸಿದ್ದಕಲಾವಿದರಿಂದ ಯಕ್ಷಗಾನ “ಸ್ವರಾಬಿಷೇಕ “ಶ್ರೀ ರಾಮಕಥಾ” ಗಾನ ಸುಧಾ” (ತೆಂಕು ಮತ್ತು ಬಡಗು)

ರಾತ್ರಿ 8 ರಿಂದ ರಾತ್ರಿ 10 ಗಂಟೆ ತನಕ ಕುಸಲ್ದ ಗುರಿಕಾರೆ ದಿನೇಶ್ ಕೊಡಪದವು ಸಾರಥ್ಯದಲ್ಲಿ ಜಿಲ್ಲೆಯ ಪ್ರಸಿದ್ಧ ಹಾಸ್ಯ ಕಲಾವಿದರ ಸಮಾಗಮದೊಂದಿಗೆ“ಯಕ್ಷ ತೆಲಿಕೆ”


ಅ. 4 ರಂದು ಸಂಜೆ 5ರಿಂದ 7.ಗಂಟೆಯ ತನಕ ನಾಟ್ಯಾಲಯ ಟ್ರಸ್ಟ್ (ರಿ) ನಾಟ್ಯ ವಿಧುಷಿ ಶ್ರೀಮತಿ ಸುಮ ದಾಮೋದರ್ ಮತ್ತು ಶಿಷ್ಯವೃಂದದವರಿಂದ
“ಸಂಗೀತ ನೃತ್ಯ ವೈಭವ”
ರಾತ್ರಿ 7ರಿಂದ ರಾತ್ರಿ 10 ಗಂಟೆಯ ತನಕ ಮಂಗಳೂರಿನ ಖ್ಯಾತ ಸಪ್ತಸ್ವರ ಆರ್ಕೇಸ್ಟ್ರಾ ಪ್ರಭಾಕರ ತಣ್ಣೀರುಬಾವಿ ತಂಡದಿಂದ “ಭಕ್ತಿ ರಸಮಂಜರಿ”

ಅ.5 ರಂದು ಸಂಜೆ 5.30 ರಿಂದ ಯಕ್ಷಕಲಾ ಪೊಳಲಿ ಇದರ 29 ವರ್ಷದ ವರ್ದಂತುತ್ಸವದ ಪ್ರಯುಕ್ತ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ :ಪೊಳಲಿ ಯಕ್ಷೋತ್ಸವ -2024 “ಕಚ್ಚೂರ ಮಾಲ್ದಿ” (ತುಳು)-ಭಾರತ ರತ್ನ”

ಅ.6 ರಂದು ಸಂಜೆ 5 ರಿಂದ 7 ಗಂಟೆಯ ತನಕ ವಿದುಷಿ ಶ್ರೀಮತಿ ವಿದ್ಯಾ ಮನೋಜ್ ಕಲಾನಿಕೇತನ ಡ್ಯಾನ್ಸ್ ಪೌಂಡೇಶನ್ (ರಿ), ಕಲ್ಲಡ್ಕ ಇವರ ಶಿಷ್ಯ ವೃಂದದವರಿಂದ ಭರತನಾಟ್ಯ“ದೇವಿ ಭವತಾರಿಣಿ”
ಸಂಜೆ 7 ರಿಂದ ರಾತ್ರಿ 10 ಗಂಟೆಯ ತನಕ ಥಂಡರ್ ಗೈಸ್ ಫೌಂಡೇಶನ್ (ರಿ), ಬಜಪೆ ತಂಡದವರಿಂದ “ಕ್ಷೇತ್ರ ಪುರಾಣ ಮಂಜರಿ ಭಕ್ತಿಭಾವದ ನೃತ್ಯ ಸಂಗಮ”

ಅ. 7 ರಂದು ಸಂಜೆ 6 ರಿಂದ ಸೊಜೆ 8 ಗಂಟೆಯ ತನಕ ನೃತ್ಯ ಸುಧಾ (ರಿ) ಮಂಗಳೂರು ವಿಧುಷಿ ಶ್ರೀಮತಿ ಸೌಮ್ಯ ಸುಧೀಂದ್ರ ರಾವ್ ಇವರ ಶಿಷ್ಯೆಯರಿಂದ “ನೃತ್ಯಾರ್ಪಣಂ”
ರಾತ್ರಿ 8 ರಿಂದ ರಾತ್ರಿ 10 ರ ತನಕ ಆರ್ಯಭಟ ಪ್ರಶಸ್ತಿ ಪುರಸ್ಕೃತ ಕಲಾ ಸಾರಥಿ ತೋನ್ಸೆ ಶ್ರೀ ಪುಷ್ಕಲ್ ಕುಮಾರ್ ಅವರಿಂದ ಹರಿಕಥಾ ಕಾಲಕ್ಷೇಪ “ಸತಿ ಸಾವಿತ್ರಿ”
ಅ. 8 ರಂದು ಸಂಜೆ 5 ರಿಂದ ರಾತ್ರಿ 10 ಗಂಟೆಯ ತನಕ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ” ಭೀಷ್ಮ ವಿಜಯ”
ಅ. 9 ರಂದು ಸಂಜೆ 5 ರಿಂದ ರಾತ್ರಿ 8 ಗಂಟೆಯ ತನಕ ಶಿವರಂಜಿನಿ ಕಲಾ ಕೇಂದ್ರ ಪೊಳಲಿ/ಬೊಕ್ಕಸ ಇವರಿಂದ ವಿಶಿಷ್ಟ ಕಾರ್ಯಕ್ರಮ “ಕಲಾ ಸಂಗಮ”
ರಾತ್ರಿ 8 ರಿಂದ ರಾತ್ರಿ 10 ಗಂಟೆಯ ತನಕ ರಾಮಕೃಷ್ಣ ತಪೋವನ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದ ಶ್ರೀ ಬಿ. ಮೋಹನ್ ಕುಮಾರ್ ಅಮ್ಮುಂಜೆ ಇವರ ನಿರ್ದೇಶನದಲ್ಲಿ ಯಕ್ಷಗಾನ ಬಯಲಾಟ “ವೀರ ಬಬ್ರುವಾಹನ-ಅಗ್ರಪೂಜೆ”
ಅ. 10 ರಂದು ಸಂಜೆ 4 ರಿಂದ ಸಂಜೆ 6 ಗಂಟೆಯ ತನಕ ಶ್ರೀಮತಿ ನಂದನಾ ಮೂರ್ತಿ ಬೆಂಗಳೂರು ಹಾಗೂ ತಂಡದವರಿಂದ “ಸುಗಮ ಸಂಗೀತ”
ಸಂಜೆ 6 ರಿಂದ ರಾತ್ರಿ 8 ಗಂಟೆಯ ತನಕ ಸುನೀತಾ ಜಯಂತ ನಾಟ್ಯ ನಿಲಯ ಉಳ್ಳಾಲ ಇವರಿಂದ “ಭರತನಾಟ್ಯ ಹಾಗೂ ಜನಪದ ನೃತ್ಯ”
ರಾತ್ರಿ 8 ರಿಂದ ರಾತ್ರಿ 10 ಗಂಟೆಯ ತನಕ ಯಶಸ್ವಿನಿ ಉಳ್ಳಾಲ್ ಸ್ವರ ಮಾಧುರ್ಯ ಸಂಗೀತ ವಿದ್ಯಾಲಯ ಇವರಿಂದ “ಸುಗಮ ಸಂಗೀತ, ದಾಸ ಕೀರ್ತನೆ, ಭಕ್ತಿ ಗಾಯನ ಹಾಗೂ ದೇವರ ನಾಮಗಳು”
ಅ. 11 ರಂದು ಸಂಜೆ 6 ರಿಂದ “ನವರಾತ್ರಿ ವೇಷಗಳ ಸಂಭ್ರಮ”

ವಿ.ಸೂಚನೆ : ಶ್ರೀ ಕ್ಷೇತ್ರಪೊಳಲಿಯಲ್ಲಿ ನಿತ್ಯ ಪೂಜೆ ರಾತ್ರಿ 7.ಗಂಟೆಗೆ ನವರಾತ್ರಿ ಪೂಜೆ ರಾತ್ರಿ 8.ಗಂಟೆಗೆ ಜರಗಲಿರುವುದು.
ಅಕ್ಟೋಬರ್ 7 ರಂದು ಸೋಮವಾರ ಲಲಿತಾಪಂಚಮಿಯ ದಿನದಂದು ರಾತ್ರಿ ಗಂಟೆ 8.ರಿಂದ ರಾತ್ರಿ 10ಗಂಟೆಯವರೇಗೆ ಶ್ರೀ ದೇವರಿಗೆ ಹರಕೆಯಾಗಿ ಬಂದ ಸೀರೆಯನ್ನು 18 ವರ್ಷ ಮೇಲ್ಪಟ್ಟ ಸ್ತ್ರೀಯರಿಗೆ ಮಾತ್ರ ಪ್ರಸಾದ ರೂಪದಲ್ಲಿ ವಿತರಿಸಲಾಗುವುದು.

ಎಂದು ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹಾಗೂ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter