ದ.ಕ.ಜಿಲ್ಲಾ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿ.ದಿಂದಶೇ. ೧೩ ಡಿವಿಡೆಂಡ್: ಸುಭಾಶ್ಚಂದ್ರ ಜೈನ್
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯನ್ನು ಹೊಂದಿರುವ ದ.ಕ.ಜಿಲ್ಲಾ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿ., ಬಂಟ್ವಾಳ ಇದರ ವಾರ್ಷಿಕ ಮಹಾಸಭೆಯು ಬಿ.ಸಿ.ರೋಡ್‌ನ ಸ್ಪರ್ಶಾ ಕಲಾಮಂದಿರದಲ್ಲಿ ಸಂಘದ ಅಧ್ಯಕ್ಷರಾದ ಸುಭಾಶ್ಚಂದ್ರ ಜೈನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭ ಸದಸ್ಯರನ್ನುದ್ದೇಶಿಸಿಮಾತನಾಡಿದ ಅವರು, ಸಂಘವು ೨೦೨೩-೨೪ ನೇ ಸಾಲಿನಲ್ಲಿ ೩೩೩.೫೨ ಕೋಟಿಯಷ್ಟು ವ್ಯವಹಾರ ನಡೆಸಿ, ರೂ. ೯೫.೪೮ ಲಕ್ಷ ಲಾಭಗಳಿಸಿದ್ದು,ಸದಸ್ಯರಿಗೆ ಶೇ. ೧೩ ಡಿವಿಡೆಂಡ್ ಪ್ರಕಟಿಸಿದರು.
ಸಂಘವು ೧.೫೫ ಕೋಟಿ ಪಾಲು ಬಂಡವಾಳ , ೨.೫೦ ಕೋಟಿ ಸ್ವಂತ ನಿಧಿ, ೬೧.೧೩ ಕೋಟಿಯಷ್ಟು ಠೇವಣಾತಿಗಳು ಹಾಗೂ ೫೫.೪೪ ಕೋಟಿಯಷ್ಟು ಹೊರಬಾಕಿ ಸಾಲ ಹೊಂದಿ ಸರ್ವಾಂಗೀಣ ಅಭಿವೃದ್ದಿ ಸಾಧಿಸಿರುವುದು ಗ್ರಾಹಕರು ಸಹಕಾರಿ ಸಂಸ್ಥೆಯ ಮೇಲೆ ಇಟ್ಟಿರುವ ವಿಶ್ವಾಸವೇ ಕಾರಣವಾಗಿದೆ ಎಂದರು.
ಈ ಸಂದರ್ಭ ೨೦೨೩-೨೪ ನೇ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ಸಂಸ್ಥೆಯ ಸದಸ್ಯರ ಹಾಗೂ ಸಿಬ್ಬಂದಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು.
ಕನ್ನಡ ಮಾಧ್ಯಮದಲ್ಲಿ ಕಲಿತು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾಥಿಗಳನ್ನು ಕೂಡ ಪ್ರತಿಭಾ ಪುರಸ್ಕಾರ ಮಾಡಲಾಯಿತು.
೨೩ ಎಸ್.ಎಸ್.ಎಲ್.ಸಿ. ಹಾಗೂ ೧೬ ಪಿ.ಯು.ಸಿ ಒಟ್ಟು ೩೯ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಉಪಾಧ್ಯಕ್ಷರಾದ ಮಂಜುನಾಥ ರೈ, ನಿರ್ದೇಶಕರಾದ ಸ್ವಪ್ನಾ ರಾಜರತ್ನ, ರಾಜೇಶ್ ಬಿ.,ಜೆ. ಗಜೇಂದ್ರ ಪ್ರಭು, ದಿವಾಕರ ದಾಸ್, ಹೇಮಂತ್ ಕುಮಾರ್ ಜೈನ್, ರವೀಂದ್ರ, ನಾರಾಯಣ ಸಿ. ಪೆರ್ನೆ, ಡಾ| ಸುದೀಪ್ ಕುಮಾರ್, ಲೋಕೇಶ್ ಸುವರ್ಣ, ಬಟ್ಯಪ್ಪ ಶೆಟ್ಟಿ, ಜಯರಾಜ್ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಅಜಿತ್ ಕುಮಾರ್ ಜೈನ್ ಉಪಸ್ಥಿತರಿದ್ದರು.
ಸಂಸ್ಥೆಯ ನಿರ್ದೇಶಕರಾದ ಮೈಕಲ್ ಡಿ’ಕೋಸ್ತಾ ಸ್ವಾಗತಿಸಿ, ರಾಯಿ ಶಾಖೆಯ ಶಾಖಾಧಿಕಾರಿಯಾದ ಮೋಹನ್ ಜಿ. ಮೂಲ್ಯ ಅವರು ಮಹಾಸಭೆ ನೋಟೀಸು ಓದಿ ದಾಖಲಿಸಿದರು, ಬಂಟ್ವಾಳ ಶಾಖೆಯ ಶಾಖಾಧಿಕಾರಿಯಾದ ಸ್ವಪ್ನ ಚಂದ್ರಪ್ರಭ ಇವರು ವರದಿ ವಾಚಿಸಿದರು.
ವಾಮದಪದವು ಶಾಖೆಯ ಶಾಖಾಧಿಕಾರಿ ಶುಭಲಕ್ಷ್ಮೀ ಅವರು ಪ್ರಾರ್ಥಿಸಿದರು.
ನಿರ್ದೇಶಕರಾದ ಸುಧಾಕರ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು, ವಿಜಯ ಕುಮಾರಿ ಇಂದ್ರ ವಂದಿಸಿದರು.
ಬಳಿಕ ಸಂಸ್ಥೆಯ ಸದಸ್ಯರು, ಸಿಬ್ಬಂದಿಗಳು ಹಾಗೂ ನಿರ್ದೇಶಕರುಗಳಿಂದ “ಸಂಗೀತ ರಸಮಂಜರಿ” ಹಾಗೂ “ಶ್ರೀ ಕೃಷ್ಣ ಲೀಲೆ – ಕಂಸ ವಧೆ” ಯಕ್ಷಗಾನ ಬಯಲಾಟ ನಡೆಯಿತು.