ಸಿದ್ದಕಟ್ಟೆ: ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ
ಬಂಟ್ವಾಳ: ದ.ಕ.ಜಿ.ಪಂ., ಕೃಷಿ ಇಲಾಖೆ ಬಂಟ್ವಾಳ ಇದರ ವತಿಯಿಂದ ಬಂಟ್ವಾಳ ಹೋಬಳಿಯ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಬಳಿ ಗುರುವಾರ ಶಿಲಾನ್ಯಾಸವನ್ನು ನೆರವೇರಿಸಲಾಯಿತು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ನೂತನವಾಗಿ ನಿರ್ಮಾಣಗೊಳ್ಳಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಾಗುವ ಕೃಷಿ ಪರಿಕರಗಳು, ಯಂತ್ರೋಪಕರಣಗಳನ್ನು ಪಡೆದುಕೊಳ್ಳುವುದರ ಜತೆಗೆ ಕೃಷಿ ಇಲಾಖೆ ನೀಡುವ ಕೃಷಿ ತಾಂತ್ರಿಕತೆಯ ಬಗ್ಗೆ ಮಾಹಿತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸರಕಾರದ ಸೌಲಭ್ಯಗಳನ್ನು ಪಡೆದು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಬಂಟ್ವಾಳ ಕೃಷಿ ಇಲಾಖೆಯ ಬಂಟ್ವಾಳ ಹೋಬಳಿ ಅಧಿಕಾರಿ ನಂದನ್ ಶೆಣೈ ಅವರು ಮಾಹಿತಿ ನೀಡಿ, ಬಂಟ್ವಾಳ ಕೃಷಿ ಇಲಾಖೆಗೆ ಸಂಬಂಽಸಿದಂತೆ ಬಂಟ್ವಾಳ ತಾಲೂಕಿನ ಬಂಟ್ವಾಳ ಹೋಬಳಿಯ ೧೬ ಗ್ರಾ.ಪಂ.ಗಳನ್ನೊಳಗೊಂಡ ೩೧ ಗ್ರಾಮಗಳ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಲಾಖೆಯ ಸ್ವಂತ ನಿವೇಶನದಲ್ಲಿ ೨೫ ಲಕ್ಷ ರೂ.ವೆಚ್ಚದಲ್ಲಿ ಸುಸಜ್ಜಿತವಾದ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡ ನಿರ್ಮಾಣವಾಗಲಿದೆ.
ಹೋಬಳಿಯ ರೈತರಿಗೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳು, ಮಾಹಿತಿಗಳ ಪ್ರಯೋಜನಪಡೆಯಬಹುದಾಗಿದೆ ಎಂದರು.ಸಂಗಬೆಟ್ಟು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ಕೋಟ್ಯಪ್ಪ ಪೂಜಾರಿ, ಉಪಾಧ್ಯಕ್ಷ ಸುರೇಶ್ ಕುಲಾಲ್, ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷ ಶೇಖರ ಶೆಟ್ಟಿ ಬದ್ಯಾರು, ಉಪಾಧ್ಯಕ್ಷೆ ಬೇಬಿ, ಸಂಗಬೆಟ್ಟು ಗ್ರಾ.ಪಂ.ನ ಮಾಜಿ ಅಧ್ಯಕ್ಷ ,ಹಾಲಿ ಸದಸ್ಯ ಸತೀಶ್ ಪೂಜಾರಿ,ಸಿದ್ದಕಟ್ಟೆ ಹಾ.ಉ.ಸ.ಸಂಘದ ಅಧ್ಯಕ್ಷ ರತ್ನ ಕುಮಾರ್ ಚೌಟ, ಸಿದ್ದಕಟ್ಟೆ ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಕೃಷಿ ಇಲಾಖೆ ಮಂಗಳೂರು ಜಂಟಿ ನಿರ್ದೇಶಕ ಹೊನ್ನಪ್ಪ ಗೋವಿಂದೇ ಗೌಡ, ಮಂಗಳೂರು ಕೃಷಿ ಇಲಾಖೆ ಉಪ ವಿಭಾಗದ ಉಪ ಕೃಷಿ ನಿರ್ದೇಶಕಿ ಕುಮುದಾ ಸಿ.ಎನ್., ಬಂಟ್ವಾಳ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ವೀಣಾ ಕೆ.ಆರ್., ಕೆಆರ್‌ಡಿಎಲ್ ಸಂಸ್ಥೆಯ ಸಹಾಯಕ ಕಾರ್ಯಪಾಲಕ ಅಭಿಯಂತರೆ ಫರಿದಾ ಬೇಗಂ, ಬಂಟ್ವಾಳ ಆತ್ಮಾ ಯೋಜನೆಯ ಮೇಲ್ವಿಚಾರಕಿ ದೀಕ್ಷಾ, ಬಂಟ್ವಾಳ ಹೋಬಳಿ ದಾಸ್ತಾನು ನಿರ್ವಹಣೆಗಾರ್ತಿ ದೀಪ್ತಿ, ಜಲಾನಯನ ಸಹಾಯಕ ವಿನೀತ್, ಕಛೇರಿ ಸಹಾಯಕ ಸಂದೀಪ್, ಸಂಗಬೆಟ್ಟು, ಕುಕ್ಕಿಪಾಡಿ ಗ್ರಾ.ಪಂ.ಸದಸ್ಯರು ಉಪಸ್ಥಿತರಿದ್ದರು.