ಬಂಟ್ವಾಳ : ಹಳ್ಳಿ ಶಾಲೆಯಲ್ಲಿ ಕಲಿತವ ಎನ್ನುವ ಕೀಳರಿಮೆ ಬೇಡ,ಹಳ್ಳಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿ ಜೇವನದಲ್ಲು ಯಶಸ್ಸು ಕಾಣುತ್ತಾನೆ ಎಂದು ಬಂಟ್ವಾಳ  ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ ಹೇಳಿದರು.
ಮಂಗಳವಾರ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ, ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ಬಾಲವಿಕಾಸ ಸಮಿತಿ,  ಗೋಳ್ತಮಜಲು ಗ್ರಾಮ ಪಂಚಾಯತ್, ಸ್ತ್ರೀಶಕ್ತಿ ಗುಂಪು ಕಲ್ಲಡ್ಕ ಶಾಲೆ ಅಂಗನವಾಡಿ ಕೇಂದ್ರ,ಇವುಗಳ ಸಂಯುಕ್ತ  ಆಶ್ರಯದಲ್ಲಿ ನಡೆದ ಕಲ್ಲಡ್ಕ ಅಂಗನವಾಡಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ‌ಭಾಗವಹಿಸಿ‌ಅವರು ಮಾತನಾಡಿದರು.


ಕಲ್ಲಡ್ಕ  ನೂತನ ಅಂಗನವಾಡಿ ಕಟ್ಟಡವನ್ನು ಕೇಂದ್ರದ ಪುಟಾಣಿ ಮಕ್ಕಳಿಂದಲೇ ಶಾಸಕರು ಉದ್ಘಾಟಿಸಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಾ ವಹಿಸಿದ್ದರು.
ಈ ಸಂದರ್ಭದಲ್ಲಿ ಶಾಸಕರನ್ನು ಅಂಗನವಾಡಿ ದತ್ತು ಸಮಿತಿ ವತಿಯಿಂದ  ಸನ್ಮಾನಿಸಲಾಯಿತು.
ಕಟ್ಟಡ ನಿರ್ಮಿಸಿದ ಗುತ್ತಿಗೆದಾರ ಪದ್ಮನಾಭ ಗೌಡ ಮೈರಾ, ಹಾಗು ಅಂಗನವಾಡಿ ಶಿಕ್ಷಕಿ ಯಮನಾರವರನ್ನು ಗೌರವಿಸಲಾಯಿತು.


ಪಂಚಾಯತ್ ಉಪಾಧ್ಯಕ್ಷರಾದ ಜಯಂತ್ ಗೌಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮುಮ್ತಾಜ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಜಯಶಂಕರ್ ಆಳ್ವ, ಉಪಸ್ಥಿತರಿದ್ದರು.


ಜಿ.ಪಂ.ಮಾಜಿ ಸದಸ್ಯರುಗಳಾದ ಸುಲೋಚನಾ ಭಟ್,  ಚೆನ್ನಪ್ಪ ಕೋಟ್ಯಾನ್, ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ದಿನೇಶ್ ಅಮ್ಟೂರು, ಜಾನ್ಸಿರಾಣಿ ಮಹಿಳಾ ಮಂಡಳಿ ಅಧ್ಯಕ್ಷ ಮೀನಾಕ್ಷಿ ಆರ್ ಪೂಜಾರಿ, ಕಲ್ಲಡ್ಕ ಶಾರದಾ ಪೂಜಾ ಸಮಿತಿಯ ಅಧ್ಯಕ್ಷ ಯೋಗೀಶ್ ,ಪಂಚಾಯತ್ ಸದಸ್ಯರುಗಳಾದ ಲಿಖಿತ ಆರ್ ಶೆಟ್ಟಿ, ರಾಜೇಶ್ ಕೊಟ್ಟಾರಿ, ಲೀಲಾವತಿ, ದೀಪಕ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಅಧ್ಯಕ್ಷೆ ತುಳಸಿ, ಕಲ್ಲಡ್ಕ ಮಾದರಿ ಶಾಲಾ ಪಧವೀಧರ ಮುಖ್ಯ ಶಿಕ್ಷಕ ಅಶ್ರಫ್,  ಮಕ್ಕಳ ತಾಯಂದಿರರು, ಸ್ತ್ರೀಶಕ್ತಿ ಗುಂಪಿನ ಸದಸ್ಯರುಗಳು ಮತ್ತಿತರರು ಭಾಗವಹಿಸಿದ್ದರು.


ಅಂಗನವಾಡಿ ಪುಟಾಣಿಗಳು ಪ್ರಾರ್ಥಿಸಿ, ಅಂಗನವಾಡಿ ಶಿಕ್ಷಕಿ ಯಮುನಾ ಸ್ವಾಗತಿಸಿ, ಶಿಶು ಅಭಿವೃದ್ಧಿ ಯೋಜನಾ ಮೇಲ್ವಿಚಾರಕಿ ಲೀಲಾವತಿ ಪ್ರಸ್ತಾವಿಸಿದರು, ಬಾಲ ವಿಕಾಸ ಸಮಿತಿಯ ರೇಣುಕಾ ವಂದಿಸಿದರು, ರಾಜೇಶ್ ಕೊಟ್ಟಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು. 

By suddi9

Leave a Reply

Your email address will not be published. Required fields are marked *