Published On: Fri, Sep 13th, 2024

ಯುವ ಸಂಗಮ (ರಿ.) ಮೆಲ್ಕಾರ್ ವತಿಯಿಂದ ಸಾಧಕ ವಿದ್ಯಾರ್ಥಿಗಳಿಬ್ಬರಿಗೆ ಸನ್ಮಾನ

ಬಂಟ್ವಾಳ :- ಮೆಲ್ಕಾರ್ ಪರಿಸರದ ಸಾಧಕ ಇರ್ವರು ಪ್ರತಿಭೆಗಳನ್ನು  ಯುವ ಸಂಗಮ (ರಿ.) ಮೆಲ್ಕಾರ್ ವತಿಯಿಂದ ಸನ್ಮಾನಿಸಲಾಯಿತು.೧೬ ಮಂದಿ ಕೊಟ್ಟೊರುವ ೧೬ ವಿಷಯಗಳನ್ನು ಎಕಕಾಲಕ್ಕೆ ನೋಡಿ,ಕೇಳಿ, ಗಮನಿಸಿ ಸ್ಮರಣ ಶಕ್ತಿಯೊಳಗೆ ದಾಖಲಿಸಿಕೊಂಡು ಪ್ರದರ್ಶನ ನೀಡುವ  “ಷೋಡಷ ಅವದಾನ “ ದ ಮೂಲಕ ಮಂಗಳೂರು ಸ್ವರೂಪ ಅಧ್ಯಯನ ಕೇಂದ್ರದ ಅನ್ವೇಶ್ ಅಂಬೆಕಲ್ಲು  ಹಾಗೂ ತಬಲ, ಹಾರ್ಮೋನಿಯಂ, ಹಾಡುಗಾರಿಕೆಯಲ್ಲಿ ಅದ್ಬುತ ಸಾಧನೆ ಮಾಡಿರುವ ಅದಿತ್ಯ ಭಟ್ ಅವರನ್ನು ಸನ್ಮಾನಿಸಲಾಯಿತು.


ಸಮಾರಂಭದ ಅಧ್ಯಕ್ಷತೆಯನ್ನು ಎ.ಜೆ.ಸಮೂಹ ಸಂಸ್ಥೆಯ ಡಾ .ಪ್ರಶಾಂತ್ ಮಾರ್ಲ ವಹಿಸಿದ್ದರು,
ಕಾರ್ಯನಿರ್ವಾಹಕ ಇಂಜಿನಿಯರ್ ತಾರನಾಥ್ ಸಾಲಿಯಾನ್ , ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಶೈಲೇಶ್ ಪೂಜಾರಿ ಮೂರ್ತೆದಾರರ ಸಹಕಾರಿ ಸಂಘದ ನಿರ್ದೇಶಕರಾದ ಗಿರೀಶ್ ಕುಮಾರ್ ಪೆರ್ವ, ಶಿಕ್ಷಕಿ ಶೈಲಜಾ ಅತಿಥಿಯಾಗಿ ಭಾಗವಹಿಸಿದ್ದರು.


ಯುವ ಸಂಗಮದ ಅಧ್ಯಕ್ಷ ಸತೀಶ್ ಪಿ. ಸಾಲಿಯಾನ್ , ಕಾರ್ಯದರ್ಶಿ ಯತೀಶ್ ಆಚಾರ್ಯ, ಕೋಶಾಧಿಕಾರಿ ರಾಜೇಶ್ ನಾಯಕ್, ಎಂ.ಎನ್. ಕುಮಾರ್ ಮೆಲ್ಕಾರ್ , ವಿಠಲ್ ಶೆಣೈ, ವಸಂತಿ ಗಂಗಾಧರ್ ಮುಂತಾದವರು ಉಪಸ್ಥಿತರಿದ್ದರು. ಶ್ರೀನಿವಾಸ ಕಾರ್ಯಕ್ರಮ ನಿರೂಪಿಸಿದರು. ಶಂಕರ ಆಚಾರ್ಯ ವಂದಿಸಿದರು.

ಅನ್ವೇಶ್ ಅಂಬೆಕಲ್ಲು  ಅವರು ಹರಿಯಾಣದ “ ಇಂಡಿಯಾ ಬುಕ್ ಆಪ್ ರೇಕಾರ್ಡ್ ” ಸಂಸ್ಥೆ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಇವರು ಇಂಜಿನಿಯರ್ ಮಧುಸೂದನ್ ಹಾಗೂ ಶಿಕ್ಷಕಿ ತೇಜಸ್ವಿ ಅಂಬೆಕಲ್ಲು ಅವರ ಪುತ್ರರಾಗಿದ್ದಾರೆ. ಇನ್ನೊರ್ವ  ಪ್ರತಿಭೆಯಾದ ಆದಿತ್ಯ ಭಟ್ ಅವರು ತಬಲ, ಹಾರ್ಮೋನಿಯಂ, ಹಾಡುಗಾರಿಕೆಯಲ್ಲಿ  ಡಾ .ವಿಜಯಕುಮಾರ ಪಾಟೀಲ ,  ಮಹೇಶ್ ಕಾಳೆ, ಪದ್ಮಶ್ರೀ ಪಂಡಿತ್, ವೆಂಕಟೇಶ್ ಕುಮಾರ ಧಾರವಾಡ ಪಂಡಿತ್ ರವೀಂದ್ರ ಯಾದಗಲ್ ಇವರ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ. ಚೆಸ್ ಪಂದ್ಯಾಟದಲ್ಲಿ ಜಿಲ್ಲಾ ಹಾಗೂ ರಾಷ್ಟ್ರಮಟ್ಟದ ಬಹುಮಾನ ಗಳಿಸಿದ್ದಾರೆ. ಇವರು ಹಲವು ಕಡೆಗಳಲ್ಲಿ ಸನ್ಮಾನಿತರಾಗಿದ್ದು ‘ ಕಲಾಶ್ರೀ ಪ್ರಶಸ್ತಿ’ಯನ್ನು ಪಡೆದಿದ್ದು ಇವರು ಪ್ರಮೋದ್ ಭಟ್ ಮತ್ತು ಲಕ್ಷಿ.ಪಿ. ಭಟ್‌ಗಳ ಪುತ್ರರಾಗಿರುತ್ತಾರೆ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter