Published On: Fri, Sep 13th, 2024

 ಬಂಟ್ವಾಳ: ಸುವರ್ಣ ಮಹೋತ್ಸವ ಸಾರ್ವಜನಿಕ ಶ್ರೀಗಣೇಶೋತ್ಸವ ಸಂಪನ್ನ

ಬಂಟ್ವಾಳ:ಇಲ್ಲಿನ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಳದ ವಠಾರದಲ್ಲಿ ಶ್ರೀಗಣೇಶೋತ್ಸವ   ಸಮಿತಿಯ ವತಿಯಿಂದ ನಡೆಯುವಸುವರ್ಣ ಮಹೋತ್ಸವ ಸಂಭ್ರಮದಸಾರ್ವಜನಿಕ ಶ್ರೀಗಣೇಶೋತ್ಸವವು ಶುಕ್ರವಾರ ರಾತ್ರಿ ಸಂಪನ್ನಗೊಂಡಿತು.


ಗಣೇಶೋತ್ಸವದ ಸುವರ್ಣ ಮಹೋತ್ಸವದ ಹಿನ್ನಲೆಯಲ್ಲಿ‌ ಇದೇ ಮೊದಲ ಬಾರಿಗೆ 7 ದಿನಗಳ ಕಾಲ ಶ್ರೀಗಣೇಶನ ಆರಾಧನೆಯು ವಿವಿಧ ಧಾರ್ಮಿಕ ಹವನಗಳೊಂದಿಗೆ ನಡೆದಿದ್ದು, ಶ್ರೀ ಗಣಪತಿ ದೇವರಿಗೆ ಬೆಳ್ಳಿ ಹಾಗೂ ಚಿನ್ನಾಭರಣವನ್ನು ಸಮರ್ಪಿಸಲಾಗಿತ್ತು.‌


ಶುಕ್ರವಾರ ಬೆಳಿಗ್ಗೆ ವಿಶೇಷವಾದ ಸಹಸ್ರಮೋದಕ ಹವನ ಆರಂಭಗೊಂಡು ಮಧ್ಯಾಹ್ನ ಪೂರ್ಣಾಹುತಿ ನಡೆಯಿತು.ಬಳಿಕ ಮಹಾಪೂಜೆ ,ಸಾರ್ವಜನಿಕ ಅನ್ನಸಂತರ್ಪಣೆಯು ನೆರವೇರಿತು.ಶುಕ್ರವಾರ ಶ್ರೀಗಣೇಶನನ್ನು ಶ್ರೀ ವೇದವ್ಯಾಸರು ಮಹಾಭಾರತವನ್ನು ವಿವರಿಸಿ ಆದನ್ನು ಗಣಪತಿಯು ಬರೆಯುವ ವಿಶೇಚ ಅಲಂಕಾರವನ್ನು  ಮಾಡಲಾಗಿದ್ದು,ಭಕ್ತರ ಗಮನಸೆಳೆಯಿತು.

ರಾತ್ರಿ ರಂಗಪೂಜೆ,ರಾತ್ರಿ ಪೂಜೆ ಹಾಗೂ ವಿಸರ್ಜನಾಪೂಜೆಯ ಬಳಿಕ ಶ್ರೀ ಗಣೇಶನ ಶೋಭಾಯಾತ್ರೆ ನಡೆಯಿತು.

 ಬಂಟ್ವಾಳ ರಥಬೀದಿ,ಮಾರ್ಕೆಟ್ ರಸ್ತೆಯಲ್ಲಿ ಹನುಮಾನ್ ದೇವಸ್ಥಾನದವರೆಗೆ ಸಾಗಿದ ಶ್ರೀಗಣೇಶನ ಮೆರವಣಿಗೆ  ಅದೇ ರಸ್ತೆಯಲ್ಲಿ ವಾಪಾಸ್ ಬಂದು ತ್ಯಾಗರಾಜರಸ್ತೆಯ ಮೂಲಕ ವೆಂಕಟರಮಣ ದೇವಸ್ಥಾನದ ಮುಂಭಾಗ ಹರಿಯುವ ನೇತ್ರಾವತಿ ನದಿಯಲ್ಲಿ ಜಲಸ್ತಂಭನಗೊಳಿಸಲಾಯಿತು.

ಶ್ರೀದೇವಳದ ಆಡಳಿತಮೊಕ್ತೇಸರರು,ಮೊಕ್ತೇಸರರು ಉಪಸ್ಥಿತರಿದ್ದರು. ನೂರಾರು ಸಂಖ್ಯೆಯಲ್ಲಿ ಭಗವದ್ಬಕ್ತರು ಶ್ರೀಗಣೇಶನ ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡರು. ಬೆಳ್ಳಿಯ ಪ್ರಭಾವಳಿ ಯನ್ನೊಳಗೊಂಡಂತೆ ಶ್ರೀ ಗಣೇಶನ ಮೂರ್ತಿಯನ್ನು ಭಜಕರು ಹೆಗಲಿನಲ್ಲಿಯೇ ಹೊತ್ತುಕೊಂಡೇ ಸಾಗಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter