ತುಂಬೆ: ಶ್ರೀ ಶಾರದಾ ಮಹೋತ್ಸವದ ವಾರ್ಷಿಕ ಮಹಾಸಭೆ,ನೂತನ ಅಧ್ಯಕ್ಷರಾಗಿ ಅನಿಲ್ ಪಂಡಿತ್ ಆಯ್ಕೆ
ಬಂಟ್ಚಾಳ: ತುಂಬೆ ಶ್ರೀ ಶಾರದಾ ಸೇವಾ ಪ್ರತಿಷ್ಠಾನ(ರಿ.)ದ ಆಶ್ರಯದಲ್ಲಿ ನಡೆಯಲಿರುವ 24ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ವಾರ್ಷಿಕ ಮಹಾಸಭೆಯು ತುಂಬೆ ಶ್ರೀ ಶಾರದಾ ಸಭಾ ಭವನದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಯಾದ ಪ್ರವೀಣ್ ಬಿ.ತುಂಬೆ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಪ್ರತಿಷ್ಠಾನದ ಕೋಶಾಧಿಕಾರಿ ಸೋಮಪ್ಪ ಕೋಟ್ಯಾನ್ ತುಂಬೆ, ಉಪಾಧ್ಯಕ್ಷೆ ಶೋಭಾ ಗೋಪಾಲ್ ಮೈಂದಾನ್, ಅರ್ಚಕರಾದ ಪೊಳಲಿ ಗಿರಿಪ್ರಕಾಶ್ ತಂತ್ರಿ, ಉತ್ಸವದ ನಿಕಟಪೂರ್ವ ಅಧ್ಯಕ್ಷರಾದ ಜಗದೀಶ್ ಪೂಜಾರಿ ಕುಮ್ಡೇಲ್, ಕಾರ್ಯದರ್ಶಿ ವಿನೋದ್ ಬೊಳ್ಳಾರಿ, ಕೋಶಾಧಿಕಾರಿ ಮನೋಹರ್ ಕೊಟ್ಟಾರಿ ತುಂಬೆ ಉಪಸ್ಥಿತರಿದ್ದರು.
ಅನಿಲ್ ಪಂಡಿತ್ ಆಯ್ಕೆ:
ಈ ಸಂಧರ್ಭದಲ್ಲಿ 24ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ನೂತನ ಅಧ್ಯಕ್ಷರನ್ನಾಗಿ ಅನಿಲ್ ಪಂಡಿತ್ ಬ್ರಹ್ಮರಕೂಟ್ಲು ಅವರನ್ನು ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ರಮಾನಾಥ್ ಅಮೀನ್ ಮುದಲ್ಮೆ, ಕೋಶಾಧಿಕಾರಿಯಾಗಿ ಹರೀಶ್ ಆಚಾರ್ಯ ರಾಮಲ್ ಕಟ್ಟೆ, ಉಪಾಧ್ಯಕ್ಷರಾಗಿ ದಿನೇಶ್ ಪರ್ಲಕ್ಕೆ, ಪ್ರಕಾಶ್ ಬಿ. ಶೆಟ್ಟಿ ತುಂಬೆ, ಜಯಂತಿ ಶ್ರೀಧರ್ ರಾಮಲ್ ಕಟ್ಟೆ, ಶಶಿಕಲಾ ಮನೋಹರ್ ಕೊಟ್ಟಾರಿ ತುಂಬೆ, ಜತೆ ಕಾರ್ಯದರ್ಶಿಗಳಾಗಿ ಸನತ್ ಪಡ್ಪು, ರೂಪೇಶ್ ಜ್ಯೋತಿಗುಡ್ಡೆ, ಪ್ರಶಾಂತ್ ಕೊಟ್ಟಾರಿ ತುಂಬೆ, ಜಲಜಾಕ್ಷಿ ವಿಜಯ್ ಕೋಟ್ಯಾನ್ ಮುದಲ್ಮೆ ಆಯ್ಕೆಯಾದರು. . ಸುಶಾನ್ ಬೊಳ್ಳಾರಿ ಸ್ವಾಗತಿಸಿ, ರಮಾನಾಥ್ ಅಮೀನ್ ಮುದಲ್ಮೆ ವಂದಿಸಿದರು.