ಪೊಳಲಿ :ಬಾರದ ಯಂತ್ರ ಇಂಜಿನಿಯರ್ ರಲ್ಲಿ ವಿವರಣೆ ಕೇಳಿದ ಶಾಸಕ ನಾಯ್ಕ್,ಸೇತುವೆಯಲ್ಲಿ ಸಿಲುಕಿದ ಲಾರಿ
ಬಂಟ್ವಾಳ: ಪೊಳಲಿ ( ಅಡ್ಡೂರು) ಪಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆಯ ಧಾರಣಾ ಸಾಮರ್ಥ್ಯ ಪರೀಕ್ಷಾ ಯಂತ್ರ ಇದುವರೆಗೂ ಬಾರದಿರುವ ಹಿನ್ನಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಇಂಜಿನಿಯರ್ ಅವರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡರು.
ಆ.25 ಅಥವಾ 26 ರಂದು ಧಾರಣಾ ಸಾಮಥ್ಯ೯ ಯಂತ್ರ ಅಗಮಿಸಿ ಪರೀಕ್ಷಿಸಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಸ್ಥಳೀಯರಿಗೆ ತಿಳಿಸಿದ್ದರು. ಆದರೆ ವಾರ ಕಳೆದರೂ ಯಂತ್ರ ಇನ್ನೂ ಬಂದಿಲ್ಲ, ಈ ನಿಟ್ಡಿನಲ್ಲಿ ಶುಕ್ರವಾರ ಪೊಳಲಿ ಕೇತ್ರದಿಂದಲೇ ಶಾಸಕ ರಾಜೇಶ್ ನಾಯ್ಕ್ ಅವರು ನೇರವಾಗಿ ಇಂಜಿನಿಯರ್ ಅಮರನಾಥ್ ಅವರಿಗೆ ಕರೆ ಮಾಡಿ ಪ್ರಶ್ನಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಇಂಜಿನಿಯರ್ ಅಮರನಾಥ್ ಈ ಬಗ್ಗೆ ಸಂಬಂಧಪಟ್ಟವರನ್ನು ವಿಚಾರಿಸಲಾಗಿದ್ದು, ದೆಹಲಿಯಿಂದ ಬರಬೇಕಾದ ಸಾಮಥ್ಯ೯ ಪರೀಕ್ಷಾ ಯಂತ್ರ ತಾಂತ್ರಿಕ ತೊಂದರೆಯಿಂದ ಬರಲು ಸಾಧ್ಯವಾಗಿಲ್ಲ.ಹಾಗಾಗಿ ವಿಳಂಬವಾಗಿದೆ ಎಂದು ವಿವರಣೆ ನೀಡಿದ್ದಾರೆ.
ಅದಷ್ಟು ಶೀಘ್ರ ಯಂತ್ರವನ್ನು ತರಿಸಿ ಸಾಮರ್ಥ್ಯ ಪರೀಕ್ಷಿಸಿ ಸೇತುವೆಯಲ್ಲಿ ವಾಹನ ಸಂಚಾರದ ಬಗ್ಗೆ ಸದ್ಯ ಜನರಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಲು ಕ್ರಮಕೈಗೊಳ್ಳುವಂತೆ ಶಾಸಕ ರಾಜೇಶ್ ನಾಯ್ಕ್ ಸೂಚಿಸಿದರು. ಈ ನಿಟ್ಟಿನಲ್ಲಿ ಇಲಾಖಾ ವತಿಯಿಂದ ಎಲ್ಲಾ ರೀತಿಯ ಪ್ರಯತ್ನ ಸಾಗಿದೆ ಎಂದು ಇಂಜಿನಿಯರ್ ಅಮರನಾಥ್ ಶಾಸಕರಿಗೆ ಮನವರಿಕೆ ಮಾಡಿದರು.
ಅಡ್ಡೂರು ಸೇತುವೆಯಲ್ಲಿ ವಾಹನ ಸಂಚಾರ ನಿಷೇಧಿಸಿರುವುದರಿಂದ ಜನರು,ವಿದ್ಯಾರ್ಥಿಗಳು,ಪೊಳಲಿ ದೇವಳಕ್ಕೆ ಬರುವ ಭಕ್ತಾದಿಗಳಿಗೆ ತೊಂದರೆಯಾಗುತ್ತಿರುವ ಹಿನ್ನಲೆಯಲ್ಲಿ ಶಾಸಕರು ವಯಕ್ತಿಕ ನೆಲೆಯಲ್ಲಿ ಉಚಿತವಾಗಿ ವಾಹನದ ವ್ಯವಸ್ಥೆ ಕಲ್ಪಿಸಿದ್ದರು.ಈ ನಡುವೆ ಜನರ ಆಕ್ರೋಶಕ್ಕೆ ಮಣಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಸ್ಥಳಕ್ಕೆ ಭೇಟಿ ನೀಡಿ ಜನರ ಅಹವಾಲು ಆಲಿಸಿದ್ದರು.ಸೇತುವೆಯ ಧಾರಣಾ ಸಾಮಥ್ಯ೯ ಪರೀಕ್ಷಿಸಿದ ಬಳಿಕ ವರದಿಯನ್ನಾಧರಿಸಿ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದರು.ಆದರೆ ಸಾಮಥ್ಯ೯ ಪರೀಕ್ಷಿಸುವ ಯಂತ್ರ ಇನ್ನೂ ಕೂಡ ಬಾರದಿವುದು ಸ್ಥಳೀಯರಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಸೇತುವೆಯಲ್ಲಿ ಸಿಲುಕಿದ ಲಾರಿ
ಅಡ್ಡೂರು ಸೇತುವೆಯಲ್ಲಿ ಘನವಾಹನ ಸಂಚಾರಕ್ಕೆ ನಿಷೇಧವಿದ್ದರೂ ಶುಕ್ರವಾರ ಹೊರಜಿಲ್ಲೆಯ ಚಾಲಕರ್ನೋ ಈಚರ್ ಲಾರಿಯೊಂದನ್ನು ಈ ರಸ್ತೆ ಮೂಲಕ ಚಲಾಯಿಸಿಕೊಂಡು ಬಂದಿದ್ದು ನಿಷೇಧದ ಹಿನ್ನಲೆಯಲ್ಲಿ ಸೇತುವೆಗೆ ಅಡ್ಡಲಾಗಿ ಹಾಕಲಾದ ಕಬ್ಬಿಣದ ರಾಡಿಗೆ ಸಿಲುಕಿದ ಘಟನೆಯು ನಡೆದಿದೆ.
ಸೇತುವೆಯ ಇಕ್ಕಡೆಯಲ್ಲು ಪೊಲೀಸ್ ಚಕ್ ಪೋಸ್ಟ್ ನಿರ್ಮಿಸಿ ಸಿಬ್ನಂದಿಗಳನ್ನು ನಿಯುಕ್ತಿಗೊಳಿಸಲಾಗಿದೆ.ಬಿ.ಸಿ.ರೋಡ್ ಮೂಲಕ ಬಂದಿದ್ದ ಈ ಲಾರಿ ಚೆಕ್ ಪೋಸ್ಟ್ ದಾಟಿ ಬಂದರೂ ಇಲ್ಲಿ ಕರ್ತವ್ಯದಲ್ಲಿದ್ದ ಬಂಟ್ವಾಳ ಗ್ರಾಮಾಂತರ ಠಾಣೆಯ ಸಿಬ್ಬಂದಿ ಪೋನ್ ನಲ್ಲಿಯೇ ತಲ್ಲಿನರಾಗಿದ್ದರೆನ್ನಲಾಗಿದ್ದ ಎಂದು ಸ್ಥಳೀಯರು ದೂರಿದ್ದಾರೆ.
ಲಾರಿ ಸೇತವೆಯಲ್ಲಿ ಸಿಲುಕಿದ ವಿಚಾರವನ್ನು ಪೊಲೀಸ್ ಸಿಬ್ಬಂದಿಗೆ ಸ್ಥಳೀಯರು ಮಾಹಿತಿ ನೀಡಿದಾಗಲು ಉಡಾಫೆಯಿಂದ ಮಾತನಾಡಿದ್ದ ಎಂದು ಹೇಳಲಾಗಿದೆ.
ಬಳಿಕ ಸ್ಥಳೀಯರೇ ಹಿಂದಕ್ಕೆ ಸರಿಸಿ ವಾಪಾಸ್ ಕಳಿಸಿಕೊಟ್ಟಿದ್ದರೆಂದು ತಿಳಿದು ಬಂದಿದೆ.