ರಾಯಿ ಶಾಲೆಯಲ್ಲಿಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ
ಬಂಟ್ವಾಳ: ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ರಾಯಿ,ಕ್ಷೇತ್ರ ಶಿಕ್ಷಣ ಇಲಾಖೆ, ಕ್ಷೇತ್ರ ಸಮೂಹ ಸಂಪನ್ಮೂಲ ಕೇಂದ್ರ ರಾಯಿ ಇದರ ಜಂಟಿ ಆಶ್ರಯದಲ್ಲಿ 2024-25 ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ರಾಯಿ ಶಾಲೆಯಲ್ಲಿ ನಡೆಯಿತು,ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರಾದ ಕೆ.ರಮೇಶ್ ನಾಯಕ್ ರಾಯಿ ದೀಪ ಪ್ರಜ್ವಲನೆಗೈದು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಾಲಾ ಎಸ್ ಡಿ ಎಂಸಿ ಅಧ್ಯಕ್ಷರಾದ ಹರೀಶ್ ಆಚಾರ್ಯ ರಾಯಿ ಅಧ್ಯಕ್ಷತೆ ವಹಿಸಿದ್ದರು.ರಾಯಿ ಗ್ರಾ.ಪಂ.ಅಧ್ಯಕ್ಷ ಸಂತೋಷ್ ಕುಮಾರ್ ರಾಯಿಬೆಟ್ಟು,ರಾಯಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಧರ್ಮರಾಜ ಪಿ ದಡ್ಡು,ಕೇಂದ್ರ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ನಾಗರತ್ನ,ಸಿಆರ್ ಪಿ ಪ್ರೇಮಲತಾ,ಉದ್ಯಮಿಗಳಾದ ರೂಪಾ ರಾಜೇಶ್ ಶೆಟ್ಟಿ,ಸುಧೀರ್ ಕುಮಾರ್ ಶೆಟ್ಟಿ ರಾಯಿ,ರಾಜೇಶ್ ಜೈನ್ ಪಡ್ರಾಯಿಗುತ್ತು,ರಾಯಿ ಗ್ರಾ.ಪಂ.ಸದಸ್ಯೆ ಉಷಾ ಸಂತೋಷ್,ರಾಯಿ ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷವಸಂತಗೌಡ ಮುದ್ದಾಜೆ,ನಮ್ಮ ಜವನೇರ ಟ್ರಸ್ಟ್ ಅಧ್ಯಕ್ಷ ಪ್ರದೀಪ್ ಮಿಯಾಲು,ರಮೇಶ್ ಗೌಡ ಮಿಯಾಲು, ಚಂದ್ರಾವತಿ ಲೋಕೇಶ್,ಹೇಮಾ.ಎಚ್.ರಾವ್ ,ಸುರೇಖಾ ಶೆಟ್ಟಿ,ತನುಜಾ, ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕರಾದ ಜಾನೆಟ್ ಕೊನ್ಸೆಸೊ ಸ್ವಾಗತಿಸಿದರು. ಬೇಬಿ ಕಾರ್ಯಕ್ರಮ ನಿರೂಪಿಸಿದರು.ಸಿದ್ದಪ್ಪ ಕರಿಯಪ್ಪ ಅವರು ವಂದಿಸಿದರು