ಸೆ.07 ರಿಂದ 11 ರವರೆಗೆ ಜಕ್ರಿಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಅಮಂತ್ರಣಪತ್ರ ಬಿಡುಗಡೆ
ಬಂಟ್ವಾಳ: ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ಜಕ್ರಿಬೆಟ್ಟು* ವತಿಯಿಂದ ನಡೆಯುವ 21 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆಯು ಸೆ.07 ರಿಂದ 11 ರವರೆಗೆ ಐದು ದಿನಗಳ ಕಾಲ ವಿವಿಧ ವೈಧಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಈ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷರು, ಮಾಜಿ ಸಚಿವರಾದ ಬಿ. ರಮಾನಾಥ ರೈ ನೆರವೇರಿಸಿದರು.
ಸಮಿತಿ ಅಧ್ಯಕ್ಷರಾದ ಪದ್ಮಶೇಖರ್ ಜೈನ್,ಪದಾಧಿಕಾರಿಗಳಾದ ಸುದೀಪ್ ಕುಮಾರ್ ಶೆಟ್ಟಿ,ಬಾಲಕೃಷ್ಣ ಅಂಚನ್, ಚಂದ್ರಶೇಖರ್ ಭಂಡಾರಿ,ಸುಧಾಕರ್ ಶಣೈ,ಶೈಲೇಶ್ ಕುಚ್ಚಿಗುಡ್ಡೆ, ವಿಶ್ವನಾಥ್ ಗೌಡ ಮಣಿ,ರಝಕ್ ನೀರಪಾದೆ, ಸತೀಶ್ ಪೂಜಾರಿ ಪಣೆಕಲ,ಡೆಂಝಿಲ್ ಅರ್ಮನ್ ನೂರನ್ಹ, ದೀಕ್ಷಿತ್ ಕುಲಾಲ್ ಹೆಬ್ರಿ, ಶ್ರೀಹರಿ ಪಾಣಾಜೆ ಉಪಸ್ಥಿತರಿದ್ದರು.
ಬಂಟ್ವಾಳ ಗಣೇಶೋತ್ಸವವೆಂದರೆ ಒಂದು ಜಾತಿ, ಮತ, ಧರ್ಮಕ್ಕೇ ಸೀಮಿತವಾಗಿರದೆ ಎಲ್ಲರೂ ಒಂದಾಗಿ ಬೆಸೆಯುವ,ಬೆರೆಯುವ ಸೌಹಾರ್ದತೆಯ ಸಮ್ಮೇಳನವಾಗಿ ರೂಪುಗೊಂಡು “ಬಂಟ್ವಾಳದ ಹಬ್ಬ” ವಾಗಿ ಆಚರಿಸಲ್ಪಡುತ್ತಿದೆ.