ಉಡುಪಿ: NSUI ಎರಡು ಬಣಗಳ ನಡುವೆ ಬೀದಿ ಹೊಡೆದಾಟ

ಉಡುಪಿ: ಉಡುಪಿ ತಾಲೂಕಿನ ಬ್ರಹ್ಮಗಿರಿಯಲ್ಲಿರುವ ಕಛೇರಿ ಮುಂದೆ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (NSUI) ದ ಎರಡು ಬಣಗಳ ಕಾರ್ಯಕರ್ತರು ಕ್ಷುಲ್ಲಕ ಕಾರಣಕ್ಕೆ ಹೊಡೆದಾಡಿಕೊಂಡ ಘಟನೆ ನಡೆದಿದೆ.
ಮಣಿಪಾಲದ ಪಬ್ ಒಂದರಲ್ಲಿ ಈ ಗಲಾಟೆ ಶುರುವಾಗಿದ್ದು, ರಾಜಿ ಸಂಧಾನಕ್ಕಾಗಿ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಕಚೇರಿಗೆ ಈ ಎರಡೂ ಬಣದ ಕಾರ್ಯಕರ್ತರನ್ನು ಕರೆಸಲಾಗಿತ್ತು. ಅಲ್ಲಿಯೂ ಈ NSUI ನ ಎರಡು ಬಣದ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಉಡುಪಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಇತ್ತಂಡಗಳ ಹೊಡೆದಾಟದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.