ಬಂಟ್ವಾಳ: ದೇವರ ಕೆಲಸದೊಂದಿಗೆ ಸಮಾಜದ ಕೆಲಸ ಮಾಡುವವರಿಗೆ ನಿತ್ಯವೂ ದೇವರ ಅನುಗ್ರಹ ಇರುತ್ತದೆ. ಬೇರೆ ಬೇರೆ ಹೆಸರಿನಲ್ಲಿ ಒಂದೇ ದೇವರನ್ನು ಆರಾಧಿಸುವ ನಾವೆಲ್ಲರೂ ಸಂಘಟಿತರಾಗಿ ಮಂದಿರ ನಿಮರ್ಾಣದ ಕಾರ್ಯದಲ್ಲಿ ಕೈ ಜೋಡಿಸಬೇಕಿದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಹೇಳಿದರು.
ಪುದು ಗ್ರಾಮದ ಸುಜೀರು ದತ್ತನಗರದಲ್ಲಿ ಜೀಣೋದ್ದಾರಗೊಳ್ಳುತ್ತಿರುವ ಶ್ರೀ ವೀರ ಹನುಮಾನ್ ಮಂದಿರಕ್ಕೆ ಸೋಮವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಉದ್ಯಮಿ ಸುರೇಶ್ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಜಿ.ಪಂ.ಸದಸ್ಯೆ ಜಯಶ್ರೀ ಕೆ., ಪುದು ಗ್ರಾ. ಪಂ. ಮಾಜಿ ಅಧ್ಯಕ್ಷ ಪ್ರಕಾಶ್ಚಂದ್ರ ರೈ ದೇವಸ್ಯ, ಪ್ರಮುಖರಾದ ಚಿತ್ತರಂಜನ್ ಶೆಟ್ಟಿ, ಲೋಕನಾಥ ಶೆಟ್ಟಿ, ಕೊಡ್ಮಾನ್ ಕಾಂತಪ್ಪ ಶೆಟ್ಟಿ ಮತ್ತಿತರರು ಇದ್ದರು.
ಜೀಣೋದ್ದಾರ ಸಮಿತಿ ಗೌರವಾಧ್ಯಕ್ಷ ಅರುಣ್ಕುಮಾರ್ ಶೆಟ್ಟಿ ನುಳಿಯಾಲು ಗುತ್ತು ಸ್ವಾಗತಿಸಿ, ಮಂದಿರ ಅಧ್ಯಕ್ಷ ನಾಗೇಶ್ ಅಮೀನ್ ವಂದಿಸಿದರು. ಗಣೇಶ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *