ಕೊನೆಗೂ ಪೊಳಲಿ ಸೇತುವೆ ಪರಿಶೀಲನೆಗೆ ಬಂದ ಜಿಲ್ಲಾಧಿಕಾರಿ, ಅಡ್ಡೂರು ಜನರಿಗೆ ನೀಡಿದ ಭರವಸೆ ಏನು?
ಪೊಳಲಿ ಪಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಡ್ಡೂರು ಸೇತುವೆದೊಂದು ದೊಡ್ಡ ತಲೆನೋವು ಆಗಿದೆ. ಏಕಾಏಕಿಯಾಗಿ ಸೇತುವೆಯನ್ನು ಬಂದ್ ಮಾಡಿ ಜನರನ್ನು ಗೊಂದಲಕ್ಕೆ ಸಿಲುಕಿ ಹಾಕಿಸಲಾಗಿತ್ತು. ಜಿಲ್ಲಾಧಿಕಾರಿ ಅವರ ಆದೇಶ ಎಂದು ಸ್ಥಳೀಯ ಅಧಿಕಾರಿಗಳು ಉಡಾಫೆ ಉತ್ತರ ಕೂಡ ನೀಡಿದ್ದರು. ಈ ಹಿಂದೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಅಡ್ಡೂರಿಗೆ ಬರುವುದಾಗಿ ಹೇಳಿ ಜನರು ಕಾಯಿಸಿ ಬಂದಿರಲಿಲ್ಲ. ಇದೀಗ ಇಂದು ಶುಕ್ರವಾರ (ಆ.22) ಸ್ಥಳಕ್ಕೆ ಡಿಸಿ ಭೇಟಿ ನೀಡಿ, ಪರಿಶೀಲನೆ ನಡೆಸಿ, ಸ್ಥಳೀಯ ಪ್ರತಿನಿಧಿಗಳ ಹಾಗೂ ಧಾರ್ಮಿಕ ಮುಖಂಡರ ಜತೆ ಮಾತನಾಡಿದ್ದಾರೆ. ಇವರ ಜತೆಗೆ ಅನೇಕ ಅಧಿಕಾರಿಗಳು ಹಾಗೂ ಅಲ್ಲಿಗೆ ಸಂಬಂಧಿಸಿದ ಎಲ್ಲ ಗ್ರಾಮಪಂಚಾಯತ್ ಅಧ್ಯಕ್ಷರು ಕೂಡ ಉಪಸ್ಥಿತರಿದ್ದರು.
ಇನ್ನು ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಸೋಮವಾರ ಅಥವಾ ಮಂಗಳವಾರ ಬ್ರಿಡ್ಜ್ ಸಾಮರ್ಥ್ಯ ಪರೀಕ್ಷಾ ಮಿಷನ್ ಬರುತ್ತದೆ. ಇನ್ನು ಮಂಗಳೂರಿನ ಕೆಲವೊಂದು ಸೇತುವೆಗಳ ಸಾಮರ್ಥ್ಯವನ್ನು ಪರೀಕ್ಷೆ ಮಾಡಲಿದೆ. ಇನ್ನು ಚೆಕ್ ಪೋಸ್ಟ್ಗಳನ್ನು ನಿರ್ಮಾಣ ಮಾಡಲಾಗುವುದು, ಅಕ್ರಮ ಮರಳು ಸಾಗಣೆಗಳನ್ನು ನಿಲ್ಲಸಬೇಕು. ಇನ್ನು ಬ್ರಿಡ್ಜ್ ಸಾಮರ್ಥ್ಯ ಪರೀಕ್ಷಾ ಮಿಷನ್ ಬಂದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
.ಇನ್ನು ಸೇತುವೆಯನ್ನು ಯಾಕೆ ಬಂದ್ ಮಾಡಲಾಗಿದೆ. ಅದರಲ್ಲಿರುವ ದೋಷಗಳು ಏನು ಎಂದು ಬಗ್ಗೆ ಇಂಜಿಯರ್ ಅಮರನಾಥ್ವಿವರಿಸಿದ್ದಾರೆ. ಇನ್ನು ಡಿಸಿ ಭೇಟಿ ವೇಳೆ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್ ಹಾಗೂ ಮಂಗಳೂರು ಪೊಲೀಸ್ ಆಯುಕ್ತರು, ಅಲ್ಲಿ ಸ್ಥಳೀಯ ಅಧಿಕಾರಿಗಳು ಉಪಸ್ಥಿತರಿದ್ದರು