ಬಂಟ್ವಾಳ: ಕಾಂಗ್ರೆಸ್, ಎಸ್.ಡಿ.ಪಿ.ಐ ಪಾಲಾದ ಪುರಸಭೆ ಆಡಳಿತ, ಅಧ್ಯಕ್ಷರಾಗಿ ವಾಸು ಪೂಜಾರಿ ಆಯ್ಕೆ
ಬಂಟ್ವಾಳ: ಇಂದು ಬಂಟ್ವಾಳ ಪುರಸಭೆ ಚುನಾವಣೆ ನಡೆದು ನಿರೀಕ್ಷೆಯಂತೆ ಕಾಂಗ್ರೆಸ್ ಸದಸ್ಯ ವಾಸು ಪೂಜಾರಿ ಲೊರೆಟ್ಟೋ ಅವರು ಪುರಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎಸ್.ಡಿ.ಪಿ.ಪಕ್ಷದ ಸದಸ್ಯ ಮೋನಿಸ್ ಆಲಿ ಅವರು ಪುರಸಭೆಯ ಉಪಧ್ಯಾಕ್ಷರಾಗಿ ಆಯ್ಕೆಯಾಗಿದ್ದಾರೆ. ಇನ್ನು ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಪಕ್ಷ ಮೈತ್ರಿ ಮಾಡಿಕೊಂಡಿದ್ದು, ಮೈತ್ರಿ ಪ್ರಕಾರ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಪಡೆದುಕೊಳ್ಳಲಿ ಯಶಸ್ವಿಯಾಗಿದೆ.
ಕಾಂಗ್ರೆಸ್ ಪಕ್ಷ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿತ್ತು. ಎಸ್.ಡಿ.ಪಿ.ಐ. ಪಕ್ಷದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡಕ್ಕೂ ನಾಮಪತ್ರವನ್ನು ಸಲ್ಲಿಸಿದೆ. ಕೊನೆಯ ಕ್ಷಣದಲ್ಲಿ ಎಸ್.ಡಿ.ಪಿ.ಐ. ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ ನಾಮಪತ್ರವನ್ನು ವಾಪಸ್ಸು ಪಡೆದುಕೊಂಡಿತ್ತು. ಇದರಿಂದ ಅಧ್ಯಕ್ಷ ಕಾಂಗ್ರೆಸ್ ಪಾಲಾಗಿದೆ. ಹೀಗಾಗಿ ಪುರಸಭೆ ಆಡಳಿತವನ್ನು ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ ನಡೆಸಲಿದೆ.
ಇನ್ನು ಬಿಜೆಪಿ ಕೂಡ ಈ ಎರಡು ಸ್ಥಾನಕ್ಕೂ ನಾಮಪತ್ರವನ್ನು ಸಲ್ಲಿಸಿತ್ತು, ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಎ.ಗೋವಿಂದ ಪ್ರಭು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹರಿಪ್ರಸಾದ್ ಭಂಡಾರಿಬೆಟ್ಟು ಸ್ಪರ್ಧಿಸಿದರು. ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ.ಮೈತ್ರಿ ಒಟ್ಟು 15 ಮತಗಳನ್ನು ಪಡೆದರೆ, ಬಿಜೆಪಿ 13 ಮತಗಳನ್ನು ಪಡೆದುಕೊಂಡಿದೆ. ಬಿಜೆಪಿ ಎರಡು ಮತಗಳಿಂದ ಸೋತಿದೆ.