ರಾಜ್ಯಪಾಲರ ವಿರುದ್ಧ ವಿವಾದಾತ್ಮಕ ಹೇಳಿಕೆ: ಐವನ್ ಡಿಸೋಜಾ ಮನೆ ಮೇಲೆ ಕಲ್ಲು ತೂರಾಟ

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ರಾಜ್ಯಪಾಲರ ವಿರುದ್ಧ ವಿವಾದತ್ಮಕ ಹೇಳಿಕೆ ನೀಡಿದ ನಂತರ ದಕ್ಷಿಣ ಕನ್ನಡದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಗುದ್ದಾಟ ನಡೆದಿದೆ. ಇದೀಗ ಐವನ್ ಡಿಸೋಜಾ ಅವರ ಮನೆ ನೆನ್ನೆ ರಾತ್ರಿ 11 ಗಂಟೆಗೆ ಕಲ್ಲು ತೂರಿದ್ದಾರೆ ಎಂದು ಹೇಳಲಾಗಿದೆ.
ಯಾರೋ ದುಷ್ಕರ್ಮಿಗಳು ಐವನ್ ಡಿಸೋಜಾ ಅವರ ಮನೆ ಕಲ್ಲು ತೂರಿರುವ ಘಟನೆ ಈಗ ಬೆಳಕಿಗೆ ಬಂದಿದೆ. ಮನೆಗೆ ಕಲ್ಲು ತೂರಾಟ ನಡೆಯುವ ವೇಳೆ ಐವನ್ ಪತ್ನಿ ಕವಿತಾ ಡಿಸೋಜಾ ಮನೆ ಬಂದ ಮೇಲೆ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ. ಹೊರಗೆ ಹೋಗಿದ್ದ ಕವಿತಾ ಡಿಸೋಜಾ ಮನೆಗೆ ಕಾರಿನಲ್ಲಿ ಬಂದಾಗ ಯಾರೋ ಇಬ್ಬರು ಬೈಕ್ನಲ್ಲಿ ಬಂದು ಮನೆ ಬಳಿ ನಿಂತಿತ್ತಿದ್ದರು. ಇನ್ನು ಬಗ್ಗೆ ಸ್ಥಳೀಯರು ಕೂಡ ಮಾಹಿತಿಯನ್ನು ನೀಡಿದ್ದಾರೆ.
ರಾಜ್ಯಪಾಲರ ವಿರುದ್ಧ ವಿವಾದಾತ್ಮಕ ಹೇಳಿಕೆಗೆ ಸಂಬಂಧಿದಂತೆ ಈ ಕಲ್ಲು ತೂರಾಟ ನಡೆದಿದೆ ಎಂದು ಹೇಳಲಾಗಿದೆ. ಮಂಗಳೂರಿನ ವೆಲೆನ್ಸಿಯಾದಲ್ಲಿರುವ ಐವಾನ್ ಡಿಸೋಜ ಮನೆ ಮೇಲೆ ನಿನ್ನೆ ರಾತ್ರಿ ನಡೆದ ಕೃತ್ಯ ನಡೆದಿದೆ. ಕಲ್ಲು ತೂರಾಟದಿಂದ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ಹೇಳಲಾಗಿದೆ. ಇದೀಗ ಪಾಂಡೇಶ್ವರ ಠಾಣಾ ಪೊಲೀಸರ ಭೇಟಿ ನೀಡಿ, ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದ್ದಾರೆ.