ಬಂಟ್ವಾಳ: ದ.ಕ.ಜಿಲ್ಲಾ ಶಾಮಿಯಾನ ಮಾಲಕರ ಸಂಘದ 7ನೇ ವಾರ್ಷಿಕ ಮಹಾ ಸಭೆ
ಬಿಸಿರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಇಂದು ದ.ಕ.ಜಿಲ್ಲಾ ಶಾಮಿಯಾನ ಮಾಲಕರ ಸಂಘ (ರಿ.)ಬಂಟ್ವಾಳ ಘಟಕದ 7ನೇ ವಾರ್ಷಿಕ ಮಹಾ ಸಭೆ ನಡೆಯಿತು. ಈ ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ಪಿಯೂಸ್ ಮ್ಯಾಕ್ಸಿಂ ಸ್ವಿಕೇರ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು ಶಾಮಿಯಾನ ಕೆಲಸಗಾರರಿಗಾಗಿ ಹುಟ್ಟಿಕೊಂಡ ಶಾಮಿಯಾನದ ಸಂಘ, ಸಂಘದ ಸದಸ್ಯರ ಶ್ರೇಯೋಭಿವೃದ್ದಿಗಾಗಿ ಸದಾ ಸ್ಪಂದಿಸುತ್ತದೆ. ಯಾವುದೇ ಸಮಸ್ಯೆಗಳು ಉಂಟಾದಾಗ ಸದಸ್ಯರು ಒಂದಾಗಿ ಹೋರಾಟಕ್ಕೆ ಸಹಕಾರ ನೀಡಿದಾಗ ಸಂಘದ ಸದೃಡವಾಗುತ್ತದೆ. ಶಾಮಿಯಾನ ಸಂಘ ಎಂಬುದು ಒಂದು ಕುಟುಂಬವಿದ್ದಂತೆ, ಹಾಗಾಗಿ ಮನೆಯೊಳಗಿನ ಏನೇ ಭಿನ್ನಾಭಿಪ್ರಾಯಗಳು ಇದ್ದರೂ ಸದಸ್ಯರು ಮನೆಯೊಳಗೆ ಚರ್ಚಿಸಿ ಪರಿಹಾರವನ್ನು ಕಂಡುಕೊಳ್ಳಬೇಕು ಎಂದರು.
ಇನ್ನು ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿರಾಗಿದ್ದ ಜಿಲ್ಲಾಧ್ಯಕ್ಷ ಬಾಬು ಕೆ.ವಿಟ್ಲ ಅವರು ಮಾತನಾಡಿ, ಶಾಮಿಯಾನ ಕೆಲಸ ಮಾಡುವ ವೇಳೆ ಅಲ್ಲಿನ ಸ್ಥಿತಿಗತಿಗಳನ್ನು ಅವಲೋಕನ ಮಾಡಿಕೊಂಡು ಅವಘಡಗಳು ನಡೆಯದಂತೆ ಹೆಚ್ಚಿನ ಜಾಗೃತೆವಹಿಸಿ ಎಂದು ಅವರು ತಿಳಿಸಿದರು. ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಹೊರತು, ದರದಲ್ಲಿ ಸ್ಪರ್ಧೆ ಬೇಡ ಎಂದು ವಿನಂತಿ ಮಾಡಿದರು. ಶಾಮಿಯಾನ ಸಂಘದ ಮೂಲಕ ಅನೇಕ ಜನಪರವಾದ ಕಾರ್ಯಗಳ ಜೊತೆ ಸಂಘಟನೆಯ ಸದಸ್ಯರಿಗೆ ಅನುಕೂಲಕರ ವ್ಯವಸ್ಥೆ ಕಲ್ಪಿಸಿದ ಘಟನೆಗಳ ಬಗ್ಗೆ ನೆನಪಿಸಿದರು.
ಶಾಮಿಯಾನ ಮಾಲಕರು ಕಾನೂನು ಪ್ರಕಾರ ಕೆಲಸ ಮಾಡಲು ಹೇಳಿದರು.
ಇದನ್ನೂ ಓದಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ‘ಆಟಿ ತಿಂಗಳ ತಿಂಡಿ ತಿನಿಸು ಔಷಧಿಯುಕ್ತ’
ವೇದಿಕೆಯಲ್ಲಿ ತಾಲೂಕು ಘಟಕದ ಕಾರ್ಯದರ್ಶಿ ಚಂದ್ರಶೇಖರ ಸಾಲಿಯಾನ್, ಕೊಶಾಧಿಕಾರಿ ಐವನ್ ಡಿ.ಸೋಜ , ಜಿಲ್ಲಾ ಕಾರ್ಯದರ್ಶಿ ನಿಶಿತ್ ಪೂಜಾರಿ, ಜಿಲ್ಲಾ ಕೋಶಾಧಿಕಾರಿ ಬಾಲಕೃಷ್ಣ ಕದ್ರಿ ಇದ್ದರು. ಗೌರವಾಧ್ಯಕ್ಷ ಸುಭಾಷ್ಚಂದ್ರ ಜೈನ್ ಸ್ವಾಗತಿಸಿ, ಕಾರ್ಯದರ್ಶಿ ಚಂದ್ರಶೇಖರ್ ಸಾಲಿಯಾನ್ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಐವನ್ ಡಿ.ಸೋಜ ಲೆಕ್ಕಪತ್ರ ಮಂಡಿಸಿದರು. ಪುರಷೋತ್ತಮ ಸಾಲಿಯಾನ್ ವಂದಿಸಿ, ವರದ್ ರಾಜ್ ಇರಾ ಕಾರ್ಯಕ್ರಮ ನಿರೂಪಿಸಿದರು.
ಇತ್ತೀಚಿಗೆ ಶಾಮಿಯಾನ ಕೆಲಸ ಮಾಡುತ್ತಿದ್ದ ವೇಳೆ ಅವಘಡದಿಂದ ಮೃತಪಟ್ಟ ಕಾರ್ಮಿಕರಿಗೆ ಶೃದ್ದಾಂಜಲಿ ಅರ್ಪಿಸಲಾಯಿತು. ಹಾಗೂ ಶಾಮಿಯಾನ ಮಾಲಕರ ಸಂಘದ ಸದಸ್ಯರಿಗಾಗಿ ಲಕ್ಕಿ ಕೂಪನ್ ಡ್ರಾ ಮಾಡಲಾಗಿಯಿತು.