ಸ್ತನ್ಯಪಾನ ಸಪ್ತಾಹ: ಸ್ತನ್ಯಪಾನ ಕೇಂದ್ರ ಉದ್ಘಾಟಿಸಿದ ಡಾ. ರಾಜೇಶ್
ಒಂದು ಮಗುವಿಗೆ ತಾಯಿಯ ಎದೆ ಹಾಲು ಎಷ್ಟು ಪ್ರಮುಖ ಎಂಬುದನ್ನು ತಿಳಿಸುವುದೇ ಸ್ತನ್ಯಪಾನ ಸಪ್ತಾಹ ಆಚರಣೆಯ ಮುಖ್ಯ ಉದ್ದೇಶವಾಗಿದೆ. ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಹಾಗೂ ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ಇವುಗಳ ಜಂಟಿ ಆಶ್ರಯದಲ್ಲಿ ಬಿಜೈ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಇಂದು (ಆಗಸ್ಟ್ 10) ರಂದು ಬೆಳಿಗ್ಗೆ 11 ಗಂಟೆಗೆ ಸ್ತನ್ಯಪಾನ ಕೇಂದ್ರವನ್ನು ದಕ್ಷಿಣ ಕನ್ನಡದ ಆರ್ ಸಿ ಎಚ್ ಅಧಿಕಾರಿ ಡಾ. ರಾಜೇಶ್ ಅವರು ಉದ್ಘಾಟಿಸಿ, ಸ್ತನ್ಯಪಾನದ ಮಹತ್ವವನ್ನು ತಿಳಿಸಿದ್ದಾರೆ. ತಾಯಿ, ಮಗು ಮನೆಯಿಂದ ಹೊರಗಡೆ ಇರುವಾಗ ಮಗುವಿನ ಹಾಲು ನೀಡುವ ವ್ಯವಸ್ಥೆ ಎಲ್ಲೂ ಇರುವುದಿಲ್ಲ, ಈ ನಿಟ್ಟಿನಲ್ಲಿ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮತ್ತು ಮುತ್ತೂಟ್ ಫೈನಾನ್ಸ್ ಜಂಟಿಯಾಗಿ ಸೇರಿ ಸುಂದರವಾದ ಸ್ತನ್ಯಪಾನ ಕೊಠಡಿ ನಿರ್ಮಿಸಿ ಕೊಟ್ಟಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡದ ಟೀ ಹೆಚ್ ಓ ಡಾಕ್ಟರ್ ಸುಜಯ್ ಭಂಡಾರಿ, ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟಿನ ಅಧಿಕಾರಿ ಕಲ್ಪನಾ ಪಿ ಕೋಟ್ಯಾನ್, ಮುತ್ತೂಟ್ ಫೈನಾನ್ಸ್ ಸಿಬ್ಬಂದಿ ಪ್ರಶಾಂತ್ ಲಕ್ಷ್ಮಣ್ ನಾಯಕ್, ಸಂದೇಶ್ ಶೇನೋಯ್, ಮಿಸ್ ಸುನಿಲಾ, ಬಿಜೈ ಯು ಪಿ ಹೆಚ್ ಸೀ ನ ಮೆಡಿಕಲ್ ಆಫೀಸರ್ ಡಾ. ಜಯಶ್ರೀ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾಸ್ತವಿಕ ಭಾಷಣವನ್ನು ಮುತ್ತೂಟ್ ಫೈನಾನ್ಸ್ ಮ್ಯಾನೇಜರ್, ಶ್ರೀ ಪ್ರಸಾದ್ ಕುಮಾರ್ ಮಾಡಿದರು.

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟಿನ, ಟ್ರಸ್ಟಿ ಶೈನಿ ಸ್ವಾಗತಿಸಿ. ಶ್ರೀಮತಿ ಗುಣವತಿ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಪೃಥ್ವಿ ಸ್ವಯಂಸೇವಕ ಟ್ರಸ್ಟ್ ಅಧ್ಯಕ್ಷೆ ಶ್ರೀಮತಿ ಲೋಲಾಕ್ಷಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಈ ಕಾರ್ಯಕ್ರಮಕ್ಕೆ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳು, ಮುತ್ತೂಟ್ ಫೈನಾನ್ಸ್ ನ ಎಲ್ಲ ಸಿಬ್ಬಂದಿಗಳು ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್ಲಾ ವೈದ್ಯರು, ಸಿಬ್ಬಂದಿಗಳು ಹಾಜರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಅಕ್ಷತಾ ಕದ್ರಿ ಮಾಡಿದರು.