41ನೇ ವರ್ಷದ ಕೈಕಂಬ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕೈಕಂಬ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಕೈಕಂಬ ಇದರ 41 ನೇ ವರ್ಷದ “ಶ್ರೀ ಗಣೇಶೋತ್ಸವ” ಆಮಂತ್ರಣ ಪತ್ರಿಕೆಯನ್ನು ಕೈಕಂಬ ಬೆನಕಧಾಮ ಕಚೇರಿಯಲ್ಲಿ ಬಿಡುಗಡೆ ಮಾಡಲಾಯಿತು. ಗಣೇಶೋತ್ಸವ ಸಮಿತಿಯ ಅಧ್ಯಕ್ಷ ವಿನೋದ್ ಮಾಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮೂರ ಶ್ರೀ ಗಣಿಶೋತ್ಸವನ್ನು ವಿಜೃಂಭಣೆಯಿಂದ ಅಚರಿಸಲು ಎಲ್ಲರ ಸಹಕಾರ ಅಗತ್ಯ ಎಂದರು.
ಈ ಸಂದರ್ಭದಲ್ಲಿ ಎಂ ಆರ್ ಶಬರಾಯ, ಗೌರವ ಕಾರ್ಯದರ್ಶಿ ಕೆ. ರಾಜೀವ, ಕಾನೂನು ಸಲಹೆಗಾರ ವಿಜಯ್ ಗೌಡ ಶಿಬ್ರಿಕೆರೆ, ಜೊತೆಕಾರ್ಯದರ್ಶಿಗಳಾದ ಭರತ್ ಶೆಟ್ಟಿ, ವಿಸಿ ಶೇಖರ್, ಶಶಿಕಾಂತ್ ಸಿ ಎಚ್, ದಿಲೀಪ್ ಕುಮಾರ್,ಸುರೇಶ್ ಸಪಳಿಗ ಮುಂತಾದವರು ವೇದಿಕೆಯಲ್ಲಿದ್ದರು. ಸಮಿತಿಯ ಸದಸ್ಯರು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಮಹೇಶ್ ಶೆಟ್ಟಿ ಸ್ವಾಗತಿಸಿ ಕೋಶಾಧಿಕಾರಿ ಶ್ರೀಧರ್ ರಾವ್ ವಂದಿಸಿದರು.