ಬಂಟ್ವಾಳ : ಬಿ.ಸಿ.ರೋಡ್ ರಕ್ತೇಶ್ವರಿ ದೇವಾಸ್ಥಾನದಲ್ಲಿ ಹಾಳೆ ಕೆತ್ತೆ ಕಷಾಯ ವಿತರಣೆ ಕಾರ್ಯಕ್ರಮ

ತುಳುನಾಡಿನಲ್ಲಿ ಆಟಿ ಅಮವಾಸ್ಯೆಯಂದು ಬೆಳಗ್ಗೆ ಹಾಳೆ ಕೆತ್ತೆ ಕಷಾಯ ಕುಡಿಯುವ ಆಚರಣೆಯಿದೆ. ಈ ವಿಶೇಷ ದಿನದಂದು ಸಾರ್ವಜನಿಕ ಹಾಳೆ ಕೆತ್ತೆ ಕಷಾಯ ವಿತರಣೆ ಕಾರ್ಯಕ್ರಮವನ್ನು ಎಲ್ಲೆಡೆ ಆಯೋಜಿಸಲಾಗುತ್ತದೆ. ಅದರಂತೆಯೇ ತುಳುಕೂಟ ಬಂಟ್ವಾಳ ಮತ್ತು ಬಿ.ಸಿ.ರೋಡ್ ಶ್ರೀ ರಕ್ತೇಶ್ವರಿ ದೇವಸ್ಥಾನ ಆಡಳಿತ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಆಟಿ ಅಮವಾಸ್ಯೆಯ ಸಾರ್ವಜನಿಕ ಹಾಳೆ ಕೆತ್ತೆ ಕಷಾಯ ವಿತರಣೆ ಕಾರ್ಯಕ್ರಮವು ಬಿ.ಸಿ.ರೋಡ್ ರಕ್ತೇಶ್ವರಿ ದೇವಾಸ್ಥಾನದಲ್ಲಿ ನಡೆಯಿತು.

ತುಳುಕೂಟ ಬಂಟ್ವಾಳದ ಅಧ್ಯಕ್ಷರಾದ ಸುದರ್ಶನ್ ಜೈನ್ ಮತ್ತು ರಕ್ತೇಶ್ವರಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ವಿಶ್ವನಾಥ್ ಬಿ ಯವರು ಸಾರ್ವಜನಿಕ ಹಾಳೆ ಕೆತ್ತೆ ಕಷಾಯ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ತುಳುಕೂಟ ಕಾರ್ಯದರ್ಶಿ ಎಚ್ಕೆ ನಯನಾಡು, ದೇವಾಲಯ ಸಮಿತಿಯ ಕಾರ್ಯದರ್ಶಿ ಎನ್. ಶವಶಂಕರ್, ಅರ್ಚಕರಾದ ರಘುಪತಿ ಭಟ್, ತುಳುಕೂಟದ ಕೋಶಾಧಿಕಾರಿ ಸುಭಾಶ್ಚಂದ್ರ ಜೈನ್ ಕೆ.ಸೀತಾರಾಮ ಶೆಟ್ಟಿ, ಸುಕುಮಾರ್ ಬಂಟ್ವಾಳ, ಪ್ರಕಾಶ್ ಶೆಟ್ಟಿ ಶ್ರೀ ಶೈಲ ತುಂಬೆ, ಸತೀಶ್ ಕುಮಾರ್ ಎಸ್. ರೋ!ಸೇಷಪ್ಪ ಮಾಸ್ಟರ್, ರೊ!ನಾರಾಯಣ ಸಿ.ಪೆರ್ಣೆ, ನಿತೇಶ್ ಪಲ್ಲಿಕಂಡ, ದೇವಪ್ಪ ಕುಲಾಲ್ ಪಂಜಿಕಲ್ಲು ಪುನೀತ್ ಮೈರನ್ ಪಾದೆ, ದಾಮೋದರ್ ಮಾಸ್ಟರ್ ಏರ್ಯ, ಪರಮೇಶ್ವರ ಮೂಲ್ಯ ಮುನ್ನೂರು ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು. ಸಾರ್ವಜನಿಕಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹಾಳೆ ಕೆತ್ತೆ ಕಷಾಯವನ್ನು ಸ್ವೀಕರಿಸಿದರು.