ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ  ಸಮುದಾಯ ಮತ್ತು ಅಭಿವೃದ್ಧಿ ವಿಭಾಗದಿಂದ ಬಂಟ್ವಾಳ ತಾಲೂಕಿನ ಮೊಂತೀಮಾರು ಮಂಚಿ ಸರಕಾರಿ  ಹಿರಿಯ ಪ್ರಾಥಮಿಕ  ಶಾಲಾ ಸಭಾಂಗಣ ನಿರ್ಮಾಣಕ್ಕೆ   ಮಂಜೂರಾದ ಒಂದು ಲಕ್ಷದ ರೂ.ಮಂಜೂರಾತಿ ಪತ್ರವನ್ನು  ಶಾಲಾಭಿವೃದ್ಧಿ  ಸಮಿತಿಯ ಅಧ್ಯಕ್ಷರಾದ ಗಣೇಶ್ ಪ್ರಭುರವರಿಗೆ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ತಾಲೂಕು ಯೋಜನಾಧಿಕಾರಿ ರಮೇಶ್  ರವರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಂಚಿ ಒಕ್ಕೂಟ ಅಧ್ಯಕ್ಷ ದಿವಾಕರ್ ನಾಯಕ್, ನಿವೃತ್ತ ಮುಖ್ಯ ಶಿಕ್ಷಕಿ ದೇವಕಿ, ಶಾಲಾ  ಮುಖ್ಯ ಶಿಕ್ಷಕಿ ಸುನಂದಾ, ವಲಯ ಮೇಲ್ವಿಚಾರಕಿ  ಸವಿತಾ, ಶಾಲಾ ಹಿರಿಯ  ವಿದ್ಯಾರ್ಥಿ ಅಶೋಕ್, ಚಂಚಲಾಕ್ಷಿ ಮೊದಲಾದವರು ಉಪಸ್ಥಿತರಿದ್ದರು. 

By suddi9

Leave a Reply

Your email address will not be published. Required fields are marked *