ಮಂಗಳೂರು: ಮೂಡುಬಿದಿರೆ ಬಸ್ ನಿಲ್ದಾಣದ ಬಳಿ ಮಾರುತಿ ಓಮ್ನಿ ಕಾರಿನಲ್ಲಿ ಜಿಂಕೆಯ ಕೊಂಬುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳ ಸಹಿತ ಅಂದಾಜು ಐದು ಲಕ್ಷ ರೂ. ಮೌಲ್ಯದ 4 ಜೊತೆ ಜಿಂಕೆಯ ಕೊಂಬುಗಳನ್ನು ವಶಪಡಿಸಿಕೊಳ್ಳಲಾಗಿದೆ.

jinke

ಬಂಧಿತರನ್ನು ಪುತ್ತಿಗೆ ಪದವು ನಿವಾಸಿ ಮುಹಮ್ಮದ್ ವಸ್ಸೀರ್(22), ಬೆಂಗಳೂರು ಪಿಎನ್ಟಿ ಕಾಲೋನಿ ನರಸಿಂಹ ಬ್ಲಾಕ್ನ ಫಿರೋಸ್ ಖಾನ್(30) ಹಾಗೂ ದಾವಣಗೆರೆ-ಚೆನ್ನಗಿರಿ ಉಬ್ರಾಣಿಯ ಗಿರೀಶ್(23) ಎಂದು ಗುರುತಿಸಲಾಗಿದೆ.

ಆರೋಪಿಗಳು ದಾವಣಗೆರೆಯ ಉಬ್ರಾಣಿಯಿಂದ ಜಿಂಕೆಯ ಕೊಂಬುಗಳನ್ನು ಅಕ್ರಮವಾಗಿ ತಂದು ಇಲ್ಲಿ ಮಾರಾಟ ಮಾಡಲು ಗ್ರಾಹಕರಿಗಾಗಿ ಹುಡುಕಾಡುತ್ತಿದ್ದ ಈ ಕುರಿತು ಬಂದ ಖಚಿತ ಮಾಹಿತಿಯಂತೆ ಕಾರ್ಯಚರಣೆ  ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿ 4 ಜೊತೆ ಜಿಂಕೆ ಕೊಂಬುಗಳು, ಒಂದು ಮಾರುತಿ ಓಮ್ನಿ ಕಾರು, 4 ಮೊಬೈಲ್ ಫೋನ್ ಗಳನ್ನು    ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ಪೈಕಿ ಫಿರೋಸ್ ಖಾನ್ ದರೋಡೆ ಪ್ರಕರಣದ ಆರೋಪಿಯಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿ ನ್ಯಾಯಾಲಯಲ್ಲಿ ವಿಚಾರಣೆಗೊಂಡು ಖುಲಾಸೆಗೊಂಡಿತ್ತು. ಸಿಸಿಬಿ ಇನ್ಸ್ಪೆಪೆಕ್ಟರ್ ವೆಲೆಂಟೈನ್ ಡಿ’ಸೋಜ ಹಾಗೂ ಪಿಎಸ್ಐ ಶ್ಯಾಮ್ಸುಂದರ್ ಹಾಗೂ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ  ಪಾಲ್ಗೊಂಡಿದ್ದರು.

By Suddi9

Leave a Reply

Your email address will not be published. Required fields are marked *